ನವದೆಹಲಿ: ಬಹು ನಿರೀಕ್ಷಿತ ಕೇಂದ್ರ ಸಂಪುಟ ಪುನಾರಚನೆಗೆ ಪ್ರಧಾನಿ ಮೋದಿ ಅಂಕಿತ ಹಾಕಿದ್ದು, ಕರ್ನಾಟಕದ ರಮೇಶ್ ಜಿಗಜಣಿಗೆ ಸೇರಿದಂತೆ ಒಟ್ಟು 19 ನೂತನ ಸಚಿವರು ಕೇಂದ್ರ ಸಚಿವರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅಂತೆಯೇ 5 ಹಾಲಿ ಸಚಿವರಿಗೆ ಸಂಪುಟದಿಂದ ಕೊಕ್ ನೀಡಲಾಗಿದ್ದು, ಹಾಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜವಡೇಕರ್ ಅವರಿಗೆ ಭಡ್ತಿ ನೀಡಿ, ಸಂಪುಟ ದರ್ಜೆ ಸಚಿವರಾಗಿ ನೇಮಕ ಮಾಡಲಾಗಿದೆ. ಉಳಿದಂತೆ 5 ಸಚಿವರನ್ನು ಸಂಪುಟದಿಂದ ಕೈ ಬಿಡಲಾಗಿದ್ದು, ಕೈಬಿಟ್ಟ ಸಚಿವರ ಪಟ್ಟಿ ಇಂತಿದೆ.
1. ಸನ್ವರ್ ಲಾಲ್ ಜತ್, ಕೇಂದ್ರ ನೀರಾವರಿ ಸಚಿವ
2. ನಿಹಾಲ್ ಚಂದ್, ಪಂಚಾಯಕ್ ರಾಜ್ ಸಚಿವ
3. ರಾಮ ಶಂಕರ್ ಕಠಾರಿಯಾ, ಮಾನವ ಸಂಪನ್ಮೂಲ ರಾಜ್ಯ ಖಾತೆ ಸಚಿವ
4. ಮನ್ಸುಖ್ ಭಾಯ್ ವಸವ, ಬುಡಕಟ್ಟು ವ್ಯವಹಾರ ಖಾತೆ ಸಚಿವ
5. ಮೋಹನ್ ಭಾಯ್ ಕುಂದಾರಿಯಾ, ಕೃಷಿ ಸಚಿವ
ರಾಷ್ಟ್ರಪತಿ ಭವನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಸಂಪುಟ ದರ್ಜೆ ಸಚಿವರಾಗಿ 19 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೂತ ಸಚಿವರಿಗೆ ಪ್ರಮಾಣ ವಚನ ಭೋದಿಸಿದರು. ರಾಷ್ಟ್ರಪತಿ ಭವನದಲ್ಲಿರುವ ಮೆಜೆಸ್ಟಿಕ್ ದರ್ಬಾರ್ ಹಾಲ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದ್ದು, ಎಲ್ಲ 19 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.