ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

'ರಾಕ್ಷಸ ಹೇಳಿಕೆ'; ಮುಂಬೈ ಬಿಜೆಪಿ ಅಧ್ಯಕ್ಷನ ಪ್ರತಿಕೃತಿ ಸುಟ್ಟ ಶಿವಸೇನೆ

ಮಹಾರಾಷ್ಟ್ರ ಸರ್ಕಾರದ ಸಂಪುಟ ವಿಸ್ತರಣೆಗೆ ಒಂದು ದಿನವಷ್ಟೇ ಬಾಕಿಯಿದ್ದು, ಶಿವಸೇನಾ ಕಾರ್ಯಕ್ರತರು ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೇಲಾರ್ ಅವರ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರ ಸರ್ಕಾರದ ಸಂಪುಟ ವಿಸ್ತರಣೆಗೆ ಒಂದು ದಿನವಷ್ಟೇ ಬಾಕಿಯಿದ್ದು, ಶಿವಸೇನಾ ಕಾರ್ಯಕ್ರತರು ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೇಲಾರ್ ಅವರ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಸೇನೆ ಬಿಜೆಪಿ ಪಕ್ಷದ ಬಗ್ಗೆ ಆಗಾಗ್ಗೆ ಎತ್ತಿರುವ ಆಕ್ಷೇಪಗಳನ್ನು 'ರಾಕ್ಷಸ' ಎಂದಿದ್ದಕ್ಕೆ ಶಿವಸೇನೆ ಕಾರ್ಯಕರ್ತರು ಕುಪಿತರಾಗಿದ್ದಾರೆ. 
ಕಳೆದ ಸಂಜೆ ಮಾತನಾಡಿದ್ದ ಶೇಲಾರ್ ಶಿವಸೇನೆಯ ಹೆಸರು ಹೇಳದೆ ಮಹಾಭಾರದ ಕಥೆ ಉಲ್ಲೇಖಿಸಿ 'ಸಣ್ಣ ರಾಕ್ಷಸ ಹೆಚ್ಚು ಗಲಾಟೆ ಮಾಡುತ್ತಿದ್ದಾನೆ" ಎಂದಿದ್ದರು. 
ತಮ್ಮ ಮಾತು ಮುಂದುವರೆಸಿ ಬಿಜೆಪಿ ಪಕ್ಷದ ಕೃಷ್ಣ ಮುಖ್ಯ ಮಂತ್ರಿ ದೇವೇಂದ್ರ ಫಡ್ನವಿಸ್ ಮುಂಬೈ ಸಿವಿಕ್ ಚುನಾವಣೆಗಳಲ್ಲಿ ರಾಕ್ಷಸನನ್ನು ಕಟ್ಟಿಹಾಕಲಿದ್ದಾರೆ ಎಂದು ಕೂಡ ಹೇಳಿದ್ದರು. 
ಆದರೆ ಇಂದು ಈ ವಿವಾದಕ್ಕೆ ಪ್ರತಿಕ್ರಿಯಿಸಿರುವ ಶೇಲಾರ್ ತಮ್ಮ ಸರ್ಕಾರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಿಸಲು ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಿರುಚಿವೆ ಎಂದಿದ್ದಾರೆ. "ಪ್ರತಿ ಚುನಾವಣೆಯಲ್ಲಿ ಸಂದರ್ಭ ವಿಭಿನ್ನವಾಗಿರುತ್ತದೆ ಎಂದು ಬಿಜೆಪಿ ಕಾರ್ಯಕತರಿಗೆ ಮನವರಿಕೆ ಮಾಡಿಕೊಡಲು ಆ ಕಥೆ ಹೇಳಿದ್ದು" ಎಂದು ಶೇಲಾರ್ ಹೇಳಿದ್ದಾರೆ. 
20 ತಿಂಗಳ ಫಡ್ನವಿಸ್ ಸಂಪುಟ ಸಭೆ ನಾಳೆ ವಿಸ್ತರಣೆಯಾಗಲಿದ್ದು, ಶಿವಸೇನೆ ಪಕ್ಷದ ಯಾರಿಗೂ ಮಂತ್ರಿಗಿರಿ ಸಿಗುವ ವಿಷಯದಲ್ಲಿ ಇಲ್ಲಿಯವರೆಗೂ ಯಾವುದೇ ಸುಳಿವಿಲ್ಲ. ಕೇಂದ್ರದಲ್ಲಿ ಎನ್ ಡಿ ಎ ಸರ್ಕಾರದ ಸಂಪುಟ ವಿಸ್ತರಣೆಯ ಬಗ್ಗೆಯೂ ಶಿವಸೇನೆ ಅತೃಪ್ತಿ ವ್ಯಕ್ತಪಡಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ