ಕಾಶ್ಮೀರ ಹಿಂಸೆಯ ಒಂದು ದೃಶ್ಯ
ವಾಶಿಂಗ್ಟನ್: ಕಾಶ್ಮೀರದಲ್ಲಿ ನಡೆದಿರುವ ಹಿಂಸೆಯಲ್ಲಿ 30 ಜನ ಪ್ರಾಣ ಕಳೆದಿಕೊಂಡಿರುವ ಹಿನ್ನಲೆಯಲ್ಲಿ ಅಮೆರಿಕಾ ಕಳವಳ ವ್ಯಕ್ತಪಡಿಸಿದ್ದು, ಆದರೆ ಇದು ಭಾರತದ ಆಂತರಿಕ ವ್ಯವಹಾರ ಎಂದು ಕೂಡ ಸ್ಪಷ್ಟೀಕರಿಸಿದೆ.
"ಹೌದು, ನಾವು ಹಿಂಸೆಯ ಬಗ್ಗೆ ಕಳವಳಗೊಂಡಿದ್ದೇವೆ" ಎಂದು ಅಮೆರಿಕಾ ಸರ್ಕಾರದ ವಕ್ತಾರ ಜಾನ್ ಕಿರ್ಬಿ ದಿನನಿತ್ಯದ ಮಾಧ್ಯಮ ಸಂವಾದ ಸಮಯದಲ್ಲಿ ಸೋಮವಾರ ಹೇಳಿದ್ದಾರೆ.
"ಶಾಂತಿಯುತವಾಗಿ ಸಮಸ್ಯೆ ಪರಿಹರಿಸಿಕೊಳ್ಳುವುದಕ್ಕೆ ಎಲ್ಲ ಪಕ್ಷಗಳು ಒಂದಾಗಾಬೇಕು ಎಂಬುದು ನಮ್ಮ ಅಭಿಮತ" ಎಂದು ಅವರು ಹೇಳಿದ್ದಾರೆ.
"ನಿರ್ಧಿಷ್ಟವಾಗಿ ಹೇಳುವುದಾದರೆ ಇದು ಭಾರತ ಸರ್ಕಾರದ ವ್ಯವಹಾರ, ಹೆಚ್ಚಿನ ಪ್ರತಿಕ್ರಿಯೆಗಾಗಿ ನೀವು ಅವರನ್ನೇ ಕೇಳಬೇಕು" ಎಂದು ಅವರು ಹೇಳಿದ್ದಾರೆ.
22 ವರ್ಷದ ಹಿಜಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯಿಂದ ಕಣಿವೆಯಲ್ಲಿ ಹಿಂಸೆ ಭುಗಿಲೆದ್ದಿದ್ದು 29 ನಾಗರಿಕರು ಮತ್ತು ಒಬ್ಬ ಪೊಲೀಸ್ ಸೇರಿದಂತೆ 30 ಜನ ಮೃತಪಟ್ಟಿದ್ದಾರೆ.