ಪ್ರಧಾನ ಸುದ್ದಿ

ಗುಜರಾತ್ ನಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲು

Srinivas Rao BV

ಅಹಮದಾಬಾದ್: ಗುಜರಾತ್ ನ ದಕ್ಷಿಣ ಭಾಗದಲ್ಲಿ ಭಾನುವಾರ ಬೆಳಿಗ್ಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ.

ದಕ್ಷಿಣ ಗುಜರಾತ್ ನ ಸೂರತ್ ಜಿಲ್ಲೆಯ 14 ಕಿ.ಮಿ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಭೂಕಂಪದ ಅನುಭವ ಉಂಟಾಗಿದೆ ಎಂದು ತಿಳಿದುಬಂದಿದೆ. ಭೂಕಂಪದ ಪರಿಣಾಮ ಜೀವಹಾನಿಯಾಗಿರುವ ಬಗ್ಗೆ ಯಾವುದೇ ವರದಿಗಳಾಗಿಲ್ಲ.
ಗುಜರಾತ್ ನಲ್ಲಿ ಭೂಕಂಪ ಉಂಟಾದಂತೆಯೇ ಮಣಿಪುರದ ಚಾಂದೇಲ್ ನಲ್ಲೂ ಭೂಕಂಪ ಸಂಭವಿಸಿದ್ದು 3.2 ತೀವ್ರತೆ ದಾಖಲಾಗಿದೆ.

SCROLL FOR NEXT