ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕರ ಮೇಲೆ ಪ್ರಕರಣ ದಾಖಲು

ವಿದ್ಯಾರ್ಥಿನಿಯ ಮನೆಯೊಳಗೆ ನುಗ್ಗಿದ ಶಿಕ್ಷಕ ಬಾಕಿಯಿರುವ ಶಾಲಾ ಶುಲ್ಕ ಕಟ್ಟುವಂತೆ ಆಗ್ರಹಿಸಿದ್ದರಿಂದ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ ಎಂದು

ಸಾಂದರ್ಭಿಕ ಚಿತ್ರ
Guruprasad Narayana
Updated On : 28 Jul 2016, 4:54 am
ಗಜಿಯಾಬಾದ್: ವಿದ್ಯಾರ್ಥಿನಿಯ ಮನೆಯೊಳಗೆ ನುಗ್ಗಿದ ಶಿಕ್ಷಕ ಬಾಕಿಯಿರುವ ಶಾಲಾ ಶುಲ್ಕ ಕಟ್ಟುವಂತೆ ಆಗ್ರಹಿಸಿದ್ದರಿಂದ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ ಎಂದು ತಿಳಿದುಬಂದಿದೆ. 
ಡಿ ಎಸ್ ಪಿ ಹಿರಿಯ ಪ್ರಾಥಮಿಕ ಶಾಲೆಯ 9 ನೇ ತರಗತಿಯ 16 ವರ್ಷದ ವಿದ್ಯಾರ್ಥಿನಿಯ ತಂದೆ ಶುಲ್ಕ ಭರಿಸಲು ಸಾಧ್ಯವಾಗದೆ ಹೋಗಿದ್ದರಿಂದ, ಮಗಳನ್ನು ಮತ್ತೊಂದು ಶಾಲೆಗೆ ಸೇರಿಸಿದ್ದರು. 
ಬುಧವಾರ ವಿದ್ಯಾರ್ಥಿನಿಯ ಮನೆಯೊಳಗೆ ನುಗ್ಗಿದ ಡಿ ಎಸ್ ಪಿ ಶಾಲೆಯ ಶಿಕ್ಷಕ ಮತ್ತು ಮೂವರು ಸಹಚರರು ಬಾಕಿಯುಳಿದಿರುವ 11000 ರು ಕೂಡಲೇ ಕಟ್ಟುವಂತೆ ತಂದೆಗೆ ಆಗ್ರಹಿಸಿದ್ದರು. 

Advertisement

Advertisement

ಭದ್ರತಾ ಸಿಬ್ಬಂದಿ ಕೆಲಸ ಮಾಡುವ ತಂದೆ ರತನ್ ಸಿಂಗ್ ಶುಲ್ಕ ಕಟ್ಟಲು ಹೆಚ್ಚಿನ ಸಮಯಾವಕಾಶ ಬೇಡಿದ್ದಾರೆ. ತೀವ್ರ ವಾಗ್ವಾದದ ನಂತರ ಶಿಕ್ಷಕ, ಪೊಲೀಸರಿಗೆ ಈ ವಿಷಯ ತಿಳಿಸಿದ್ದು, ಪೊಲೀಸರು ರತನ್ ಸಿಂಗ್ ಅವರನ್ನು ಪ್ರಶ್ನಿಸಲು ಕರೆದೊಯ್ದಿದ್ದಾರೆ. 
ತಂದೆ ಪೋಲೀಸರ ವಶದಲ್ಲಿದ್ದಾಗ, ಮನೆಯಲ್ಲಿ ಒಂಟಿಯಾಗಿದ್ದ ವಿದ್ಯಾರ್ಥಿನಿ ತನ್ನ ದುಪ್ಪಟ್ಟ ಬಳಸಿ ನೇಣಿಗೆ ಶರಣಾಗಿದ್ದಾಳೆ. ಮನೆಗೆ ದಾಳಿಯಿಟ್ಟ ನಾಲ್ವರು ಮತ್ತು ಡಿ ಎಸ್ ಪಿ ಶಾಲೆಯ ಎಲ್ಲ ಶಿಕ್ಷಕ ಸಿಬ್ಬಂದಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲಿಸ್ ಅಧಿಕಾರಿ ಅನೀಶ್ ಗೌತಮ್ ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments