ಅಮೀರ್ ಖಾನ್ ಮತ್ತು ಮನೋಹರ್ ಪರ್ರಿಕರ್ 
ಪ್ರಧಾನ ಸುದ್ದಿ

ಅಮೀರ್ ಖಾನ್ ವಿರುದ್ಧ ಟೀಕೆ; ಪರ್ರಿಕರ್ ವಿರುದ್ಧ ಟ್ವಿಟ್ಟರ್ ನಲ್ಲಿ ಜನರ ಆಕ್ರೋಶ

'ಅಸಹಿಷ್ಣುತೆ' ಬಗೆಗೆ ಅಮೀರ್ ಖಾನ್ ಅವರ ಹೇಳಿಕೆಯನ್ನು ಟೀಕೆ ಮಾಡಲು ಭದ್ರತಾ ಸಚಿವ ಮನೋಹರ್ ಪರ್ರಿಕರ್ ನೆನ್ನೆ ಮುಂದಾದರೆ, ಇದು ಹಲವು ರಾಜಕಾರಣಿಗಳು ಮತ್ತು ತಾರೆಯರಿಗೆ ಆಕ್ರೋಶ

'ಅಸಹಿಷ್ಣುತೆ' ಬಗೆಗೆ ಅಮೀರ್ ಖಾನ್ ಅವರ ಹೇಳಿಕೆಯನ್ನು ಟೀಕೆ ಮಾಡಲು ಭದ್ರತಾ ಸಚಿವ ಮನೋಹರ್ ಪರ್ರಿಕರ್ ನೆನ್ನೆ ಮುಂದಾದರೆ, ಇದು ಹಲವು ರಾಜಕಾರಣಿಗಳು ಮತ್ತು ತಾರೆಯರಿಗೆ ಆಕ್ರೋಶ ತರಿಸಿದೆ. ತಾರೆಯರು ಮಾತ್ರವಲ್ಲ ಸಾಮಾನ್ಯ ಟ್ವಿಟ್ಟರ್ ಬಳಕೆದಾರರು ಕೂಡ, ಅಮೀರ್ ಖಾನ್ ಅವರನ್ನು ಸ್ನ್ಯಾಪ್ ಡೀಲ್ ಸಂಸ್ಥೆಯ ಪ್ರಚಾರಕ ಸ್ಥಾನದಿಂದ ಕೆಳಗಿಳಿಸಲು ಸರ್ಕಾರ ಹಿನ್ನಲೆಯಲ್ಲಿ ಕೆಲಸ ಮಾಡಿದೆ ಎಂದು ಪರ್ರಿಕರ್ ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ. 
"ಅವರ ಜಾಹಿರಾತು ಹಾಕಿದ್ದ ಸಂಸ್ಥೆಯೊಂದರ ಉತ್ಪನ್ನಗಳನ್ನು ಜನರು ಕೊಂಡು ನಂತರ ಹಿಂದಿರುಗಿಸಿದರು. ಆ ಸಂಸ್ಥೆ ಕೊನೆಗೆ ಆ ಜಾಹಿರಾತನ್ನು ಹಿಂಪಡೆಯಿತು. ದೇಶಪ್ರೇಮ ಮತ್ತು ತಾಯ್ನಾಡನ್ನು ಗೌರವಿಸುವ ಪಾಠಗಳನ್ನು ಮನೆಯಲ್ಲಿಯಷ್ಟೇ ಕಲಿಯಬಹುದು. ನೀವು ನಿಮ್ಮ ತಂದೆ ಮತ್ತು ತಾಯಿಗೆ ಗೌರವ ಕೊಡದೆ ಹೋದರೆ ನಿಮ್ಮ ಮಕ್ಕಳು ಅದನ್ನೇ ಕಲಿತು ನಿಮಗೂ ಅದೇ ಗೌರವ ನೀಡುತ್ತಾರೆ" ಎಂದು ಪುಣೆಯಲ್ಲಿ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಅಮೀರ್ ಖಾನ್ ಅವರ ಹೇಳರು ಹೇಳದೆ ಪರೋಕ್ಷವಾಗಿ ನಟನನ್ನು ಪರ್ರಿಕರ್ ಟೀಕಿಸಿದ್ದರು. 
ಈ ಇಡೀ ಪ್ರಕರಣದ ಹಿಂದೆ ಸರ್ಕಾರದ ಕೈವಾಡ ಇದೆ ಎಂದು ಈಗ ಪರ್ರಿಕರ್ ಒಪ್ಪಿಕೊಂಡಿದ್ದಾರೆ ಎಂದು ಕೆಲವರು ಟ್ವೀಟ್ ಮಾಡಿದ್ದರೆ, ಕಾಶ್ಮೀರದಲ್ಲಿ ಭಾರತ ಸೇನೆ ಏನು ಮಾಡುತ್ತಿದೆ ಎನ್ನುವುದಕ್ಕಿಂತ ಅಮಿರ್ ಖಾನ್ ಹೇಳಿಕೆ ಬಗ್ಗೆ ರಕ್ಷಣಾ ಸಚಿವ ತಲೆ ಕೆಡಿಸಿಕೊಂಡಿರುವಂತಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. 
"ಅವಶ್ಯಕತೆ ಇರುವ ಕಡೆ ತಮ್ಮ ಗನ್ ಗೆ ತರಬೇತಿ ನೀಡುವ ಬದಲು ನಟರಿಗೆ ಪಾಠ ಕಲಿಸಲು ಬೆದರಿಕೆ ಹಾಕುತ್ತಿದ್ದಾರೆ ಮನೋಹರ್ ಪರ್ರಿಕರ್. ನಾಚಿಕೆಗೇಡು" ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್