ಪ್ರಧಾನ ಸುದ್ದಿ

ಯಾವುದೇ ಸರ್ಕಾರಕ್ಕೆ ಇಷ್ಟು ಪ್ರೀತಿ ಸಿಕ್ಕಿರುವುದು ಇದೇ ಮೊದಲು: ಮೋದಿ

ಎರಡು ವರ್ಷ ಸಂಪೂರ್ಣಗೊಳಿಸಿ ಮೂರನೆ ವರ್ಷಕ್ಕೆ ಕಾಲಿಟ್ಟ ನಂತರವೂ ಸರ್ಕಾರವೊಂದಕ್ಕೆ ಜನರಿಂದ ಇಷ್ಟು ಪ್ರೀತಿ ದೊರಕುವುದು ಮುಂದುವರೆದಿರುವುದು ಇದೇ ಮೊದಲ ಬಾರಿ ಎಂದಿದ್ದಾರೆ

ಭುವನೇಶ್ವರ: ಎರಡು ವರ್ಷ ಸಂಪೂರ್ಣಗೊಳಿಸಿ ಮೂರನೆ ವರ್ಷಕ್ಕೆ ಕಾಲಿಟ್ಟ ನಂತರವೂ ಸರ್ಕಾರವೊಂದಕ್ಕೆ ಜನರಿಂದ ಇಷ್ಟು ಪ್ರೀತಿ ದೊರಕುವುದು ಮುಂದುವರೆದಿರುವುದು ಇದೇ ಮೊದಲ ಬಾರಿ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

"ಯಾವುದೇ ಚುನಾವಣೆ ಇಲ್ಲ, ಯಾವುದೇ ಪ್ರತಿಭಟನೆ ಇಲ್ಲ ಹೀಗಿದ್ದೂ ಈ ಸುಡುಬಿಸಿಲಿನಲ್ಲಿ ನೀವೆಲ್ಲರೂ ಬಂದಿದ್ದೀರಿ. ಇದು ಸರ್ಕಾರದೆಡೆಗೆ ನಿಮ್ಮ ಅಭೂತಪೂರ್ವ ಪ್ರೀತಿ ತೋರಿಸುತ್ತದೆ" ಎಂದು ಒರಿಸ್ಸಾದ ಬಲಸೋರ್ ನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮೋದಿ ಹೇಳಿದ್ದಾರೆ.

"ಜನರಿಂದ ಇಂತಹ ಅಭೂತಪೂರ್ವ ಬೆಂಬಲ ನೋಡಿದ ಮೇಲೆ ದೇಶದ ಜನಕ್ಕಾಗಿ ಇನ್ನೂ ಹೆಚ್ಚು ಕೆಲಸ ಮಾಡಲು ನಾವು ಸಬಲರಾಗಿದ್ದೇವೆ" ಎಂದು ಕೂಡ ಅವರು ಹೇಳಿದ್ದಾರೆ.

ಹಿಂದಿನ ಸರ್ಕಾರಕ್ಕೆ ಹೋಲಿಸಿದಾಗ ಆಡಳಿತದ ಬಗ್ಗೆ ಅವರ ಸರ್ಕಾರ ತಳೆದಿರುವ ಧೋರಣೆಯ ವ್ಯತ್ಯಾಸವನ್ನು ಒತ್ತಿ ಹೇಳಿರುವ ಮೋದಿ "ಈ ಹಿಂದಿನ ಸರ್ಕಾರಗಳು ಅವರು ಮಾತ್ರ ದೇಶಕ್ಕೆ ಕೆಲಸ ಮಾಡಬೇಕು ಮತ್ತು ಅವರಷ್ಟೇ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ನಂಬಿದ್ದರು ಆದರೆ ನಮ್ಮ ಸರ್ಕಾರ, ಅಭಿವೃದ್ಧಿಗೆ ಪ್ರತಿ ನಾಗರಿಕನ ಕಾಣಿಕೆ ಮುಖ್ಯ ಎಂದು ತಿಳಿದಿದೆ" ಎಂದಿದ್ದಾರೆ.

"ನಮ್ಮ ಸರ್ಕಾರ ಸಬ್ ಕ ಸಾಥ್-ಸಬ್ ಕ ವಿಕಾಸ್ (ಎಲ್ಲರ ಭಾಗವಹಿಸುವಿಕೆ ಮತ್ತು ಎಲ್ಲರ ಅಭಿವೃದ್ಧಿ)ಯಲ್ಲಿ ನಂಬಿಕೆಯಿಟ್ಟಿದೆ" ಎಂದು ಕೂಡ ಅವರು ಹೇಳಿದ್ದಾರೆ.

"ಯಾವುದೇ ರಾಜ್ಯ ಅಥವಾ ಪ್ರದೇಶ ಅಭಿವೃದ್ಧಿ ಅಥವಾ ಬದಲಾವಣೆಯಿಂದ ಹಿಂದುಳಿಯುವುದು ನಮಗೆ ಬೇಡ. ಎಲ್ಲರಿಗೂ ಅಭಿವೃದ್ಧಿಯ ಲಾಭ ಸಿಗಬೇಕು. ಎಲ್ಲ ಸರ್ಕಾರಗಳು ಬಡಜನರಿಗೆ ಒಳ್ಳೆಯ ಯೋಜನೆಗಳನ್ನು ನೀಡುವತ್ತ ಗಮನ ಹರಿಸಬೇಕು. ನಾವು ಬಡತನ ನಿರ್ಮೂಲನೆಗಾಗಿ ವಿಶೇಷ ಹೆಜ್ಜೆಗಳನ್ನು ಇಟ್ಟಿದ್ದೇವೆ" ಎಂದು ಅವರು ಹೇಳಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!