ಅಫ್ಘಾನಿಸ್ಥಾನದಲ್ಲಿ ನಿಧನರಾದ ಅಮೆರಿಕಾದ ಪತ್ರಕರ್ತ-ಛಾಯಾಗ್ರಾಹಕ ಡೇವಿಡ್ ಗಿಲಕಿ, ಸೌಜನ್ಯ: ಎನ್ ಪಿ ಆರ್ [ಡಾಟ್] ಆರ್ಗ್ 
ಪ್ರಧಾನ ಸುದ್ದಿ

ಅಫ್ಘಾನಿಸ್ಥಾನದಲ್ಲಿ ಅಮೆರಿಕಾದ ಪತ್ರಕರ್ತ-ಛಾಯಾಗ್ರಾಹಕ ಹತ

ಅಮೆರಿಕಾದ ನ್ಯಾಷನಲ್ ಪಬ್ಲಿಕ್ ರೇಡಿಯೋದ (ಎನ್ ಪಿ ಆರ್) ಪ್ರಶಸ್ತಿ ವಿಜೇತ ಛಾಯಾಗ್ರಾಹಕ-ಪತ್ರಕರ್ತ ಡೇವಿಡ್ ಗಿಲಕಿ ಅಫ್ಘಾನಿಸ್ಥಾನದಲ್ಲಿ ವರದಿಯ ಮಾಡುತ್ತಿದ್ದಾಗ ಭಾನುವಾರ ಹತರಾಗಿದ್ದಾರೆ.

ವಾಶಿಂಗ್ಟನ್: ಅಮೆರಿಕಾದ ನ್ಯಾಷನಲ್ ಪಬ್ಲಿಕ್ ರೇಡಿಯೋದ (ಎನ್ ಪಿ ಆರ್) ಪ್ರಶಸ್ತಿ ವಿಜೇತ ಛಾಯಾಗ್ರಾಹಕ-ಪತ್ರಕರ್ತ ಡೇವಿಡ್ ಗಿಲಕಿ ಅಫ್ಘಾನಿಸ್ಥಾನದಲ್ಲಿ ವರದಿಯ ಮಾಡುತ್ತಿದ್ದಾಗ  ಭಾನುವಾರ ಹತರಾಗಿದ್ದಾರೆ.

ಅಫ್ಘಾನಿಸ್ಥಾನದ ಸೇನೆಯ ಜೊತೆ ಹೆಲ್ಮಂಡ್ ಪ್ರಾಂತ್ಯದಲ್ಲಿ ಪ್ರಯಾಣಿಸುತ್ತಿದ್ದ ೫೦ ವರ್ಷದ ಗಿಲಕಿ, ಜೊತೆಗಿದ್ದ ಸೇನೆಯ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು, ಇವರ ವಾಹನವೂ ಅದಕೆ ಗುದ್ದಿ ಮೃತಪಟ್ಟಿದ್ದಾರೆ ಎಂದು ಎನ್ ಪಿ ಆರ್ ವಕ್ತಾರ ಇಸಾಬೆಲ್ ಲಾರಾ ತಿಳಿಸಿದ್ದಾರೆ.

ಇವರ ಜೊತೆಗೆ ಅಫ್ಘಾನಿಸ್ಥಾನದ ಅನುವಾದಕ ೩೮ ವರ್ಷದ ಜಬಿಹುಲ್ಲ ತಮನ್ನ ಕೂಡ ಹತಾರಾಗಿದ್ದಾರೆ ಎಂದು ಇ ಎಫ್ ಇ ನ್ಯೂಸ್ ವರದಿ ಮಾಡಿದೆ.

ಜೊತೆಗೆ ಪ್ರಯಾಣಿಸುತ್ತಿದ್ದ ಎನ್ ಪಿ ಆಪ್ ಪತ್ರಕರ್ತರಾದ ಟಾಮ್ ಬೋವಮ್ ಮತ್ತು ಮೋನಿಕಾ ಈವ್ಸ್ಟೀವಾ ಸಾವಿನ ದವಡೆಯಿಂದ ಪಾರಾಗಿದ್ದಾರೆ.

ವಿಶ್ವದ ಅತ್ಯುತ್ತಮ ಪತ್ರಕರ್ತ-ಛಾಯಾಗ್ರಾಹಕರಲ್ಲಿ ಒಬ್ಬರಾಗಿದ್ದ ಗಿಲಕಿ ೨೦೦೭ ಎಮ್ಮಿ ಪ್ರಶಸ್ತಿ ಮತ್ತು ೨೦೧೦ರಲ್ಲಿ ಜಾರ್ಜ್ ಪಾಲಕ್ ಪ್ರಶಸ್ತಿ ಮತ್ತಿತರ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

"೯/೧೧ ದಾಳಿಯಿಂದಲೂ ಡೇವಿಡ್ ಇರಾಕ್ ಮತ್ತು ಅಫ್ಘಾನಿಸ್ಥಾನಗಳಲ್ಲಿ ಯುದ್ಧವನ್ನು ವರದಿ ಮಾಡುತ್ತಿದ್ದರು. ಹೇಗೆ ಜನ ಈ ಯುದ್ಧದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ ಎಂಬುದನ್ನು ತಿಳಿಸಿ ಸಾರ್ವಜನಿಕರಿಗೆ ಸಹಾಯ ಮಾಡುವ ಉದ್ದೇಶ ಅವರದ್ದಾಗಿತ್ತು. ಈ ಗುರಿಯಲ್ಲೇ ಅವರು ಮೃತಪಟ್ಟಿದ್ದಾರೆ" ಎಂದು ಎನ್ ಪಿ ಆರ್ ನ ಹಿರಿಯ ಉಪಾಧ್ಯಕ್ಷ ಮೈಕೆಲ್ ಒರೇಸ್ಕೆಸ್ ಹೇಳಿದ್ದಾರೆ.

ಪತ್ರಕರ್ತರ ಸುರಕ್ಷಾ ಸಂಘ (ಸಿ ಪಿ ಜೆ) ವರದಿಯ ಪ್ರಕಾರ ೧೯೯೨ ರಿಂದ ಇಲ್ಲಿಯವರೆಗೆ ವರದಿ ಮಾಡುವಾಗಲೇ ೨೭ ಪತ್ರಕರ್ತರು ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Belagavi: ಲವರ್ ಜೊತೆ ಮಗಳು ಪರಾರಿ, ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

SCROLL FOR NEXT