ಕಲಾಕೃತಿಗಳೊಂದಿಗೆ ನರೇಂದ್ರ ಮೋದಿ 
ಪ್ರಧಾನ ಸುದ್ದಿ

ಪುರಾತನ ಕಲಾಕೃತಿಗಳನ್ನು ಮರಳಿಸಿದ ಅಮೆರಿಕ, ದೊಡ್ಡಣ್ಣನಿಗೆ ಧನ್ಯವಾದ ಹೇಳಿದ ಮೋದಿ

ಕಂಚಿನ ಗಣೇಶ್ ವಿಗ್ರಹದಿಂದ ಹಿಡಿದು ಬಾಹುಬಲಿ ಮೂರ್ತಿ ಸೇರಿದಂತೆ ಭಾರತದ ವಿವಿಧೆಡೆಯಿಂದ ಕಳ್ಳ ಮಾರ್ಗದ ಮೂಲಕ ಅಮೆರಿಕ ಸೇರಿದ್ದ ಸುಮಾರು...

ವಾಷಿಂಗ್ಟನ್: ಕಂಚಿನ ಗಣೇಶ್ ವಿಗ್ರಹದಿಂದ ಹಿಡಿದು ಬಾಹುಬಲಿ ಮೂರ್ತಿ ಸೇರಿದಂತೆ ಭಾರತದ ವಿವಿಧೆಡೆಯಿಂದ ಕಳ್ಳ ಮಾರ್ಗದ ಮೂಲಕ ಅಮೆರಿಕ ಸೇರಿದ್ದ ಸುಮಾರು 200ಕ್ಕೂ ಅಧಿಕ ಬೆಲೆ ಬಾಳುವ ಅತೀ  ಪುರಾತನ (ಸುಮಾರು 66.74ಕೋಟಿ ಮೌಲ್ಯ) ಕಾಲದ ಕಲಾಕೃತಿಗಳನ್ನು ಅಮೆರಿಕ ಮಂಗಳವಾರ ಭಾರತಕ್ಕೆ ಹಸ್ತಾಂತರಿಸಿದೆ.
ಮೂರು ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಾಷಿಂಗ್ಟನ್ ಡಿಸಿಗೆ ಆಗಮಿಸಿದಾಗ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ನಂತರ ವಾಷಿಂಗ್ಟನ್​ನ ಬ್ಲೇರ್ ಹೌಸ್​ನಲ್ಲಿ ನಡೆದ ಸಮಾರಂಭದಲ್ಲಿ ಮೊದಿ ಅವರಿಗೆ ಈ ಕಲಾಕೃತಿಗಳನ್ನು ಹಸ್ತಾಂತರಿಸಲಾಯಿತು ಎಂದು ಶ್ವೇತಭವನದ ವಕ್ತಾರರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಈ ಕಲಾಕೃತಿಗಳನ್ನು ಹಣಕ್ಕಾಗಿ ಮಾರಾಟ ಮಾಡಿರಬಹುದು. ಆದರೆ ಇವು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಒಂದು ಭಾಗ ಎಂದರು.
ಭಾರತದ ಪುರಾತನ ಸ್ಥಳಗಳಿಂದ ಲೂಟಿ ಮಾಡಿದ್ದಂತಹ ವಸ್ತುಗಳು, 2000 ವರ್ಷಗಳ ಹಿಂದಿನ ಟೆರ್ರಾ ಕೋಟಾ ತುಣುಕುಗಳು, ಪುರಾತನ ದೇವರ ವಿಗ್ರಹ ಸೇರಿದಂತೆ ಹಲವು ಅಪರೂಪದ ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ. ಇದರಲ್ಲಿ ಒಂದು ಸಾವಿರ ವರ್ಷಗಳ ಹಿಂದಿನ ಗಣೇಶನ ಕಂಚಿನ ವಿಗ್ರಹ, ಚೆನ್ನೈನ ಶಿವನ್ ದೇವಾಲಯದಿಂದ ಕಳವುಗೈದಿದ್ದ ಚೋಳರ ಕಾಲದ ಕವಿ, ಸಂತ ಮನಿಕ್ಕವಿಚವಕರ್ ಪ್ರತಿಮೆ ಕೂಡಾ ಸೇರಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಎಚ್ಚರಿಕೆಗೆ ತಲೆಬಾಗದ ಇರಾನ್​: ಸೌದಿ ನೆಲೆಯಲ್ಲಿ ಕ್ಷಿಪಣಿ ದಾಳಿ; ಅಮೆರಿಕಾದ 5 ಟ್ಯಾಂಕರ್ ವಿಮಾನಗಳಿಗೆ ಹಾನಿ..!

West Asia conflict effect: LPG ಕೊರತೆ ತೀವ್ರ; ಮನೆಗಳಲ್ಲಿ PNG, ಹೋಟೆಲ್ ಗಳು ಕಲ್ಲಿದ್ದಲು ಬಳಕೆ ಮಾಡುವಂತೆ ಕೇಂದ್ರ ಸರ್ಕಾರ ಸಲಹೆ

ಹೊಸ ಖಮೇನಿ ಭಯೋತ್ಪಾದಕ ನಾಯಕ; ಆತನ ಬಗ್ಗೆ ಮಾಹಿತಿ ನೀಡಿದವರಿಗೆ 10 ಮಿಲಿಯನ್ ಡಾಲರ್ ಬಹುಮಾನ: ಅಮೆರಿಕ

ಒಡಿಶಾ 'ಕೈ' ಶಾಸಕರಿಗೆ' ಟ್ರಬಲ್ ಶೂಟರ್ ಡಿಕೆಶಿ ಆತಿಥ್ಯ: 'ಆಪರೇಷನ್ ಕಮಲ' ತಡೆಗೆ ಕೈಗೊಂಡ ಮುನ್ನೆಚ್ಚರಿಕಾ ಕ್ರಮ; ಕಾಂಗ್ರೆಸ್ ಸಮರ್ಥನೆ

ಬೇಸಿಗೆಯಲ್ಲಿ ಬತ್ತಿದ ಬೋರ್ ವೆಲ್ ಗಳು: ಬೆಂಗಳೂರಿನ ಧೋಬಿ ಘಾಟ್ ಗಳಲ್ಲಿ ನೀರಿನ ಅಭಾವ!

SCROLL FOR NEXT