ರಾಷ್ಟ್ರೀಯ ಜನತಾ ದಳ (ಆರ್ ಜೆ ಡಿ) ಪಕ್ಷದ ಮುಖಂಡ ಲಾಲು ಪ್ರಸಾದ್ 
ಪ್ರಧಾನ ಸುದ್ದಿ

ಅಭಿಮಾನಿಗಳೊಂದಿಗೆ ೬೯ನೇ ಹುಟುಹಬ್ಬ ಆಚರಿಕೊಂಡ ಲಾಲು ಪ್ರಸಾದ್

ರಾಷ್ಟ್ರೀಯ ಜನತಾ ದಳ (ಆರ್ ಜೆ ಡಿ) ಪಕ್ಷದ ಮುಖಂಡ ಲಾಲು ಪ್ರಸಾದ್ ಅವರು ತಮ್ಮ ಅಭಿಮಾನಿಗಳೊಂದಿಗೆ ೬೯ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

ಪಾಟ್ನಾ: ರಾಷ್ಟ್ರೀಯ ಜನತಾ ದಳ (ಆರ್ ಜೆ ಡಿ) ಪಕ್ಷದ ಮುಖಂಡ ಲಾಲು ಪ್ರಸಾದ್ ಅವರು ತಮ್ಮ ಅಭಿಮಾನಿಗಳೊಂದಿಗೆ ೬೯ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

ತಮ್ಮ ಕುಟುಂಬದ ರಾಜಕೀಯ ಸನ್ನಿವೇಶ ಕೂಡ ಈ ವರ್ಷದಲ್ಲಿ ಉನ್ನತಿಯಾಗಿದ್ದು, ಶನಿವಾರ ಬೆಳಗ್ಗೆ ಅವರ ಸ್ವಗೃಹದಲ್ಲಿ ಸಂಭ್ರಮದ ವಾತಾವರಣ ಮೂಡಿತ್ತು.

ಹೂಗಳಿಂದ ಅಲಂಕರಿಸಿದ್ದ ಮನೆಯಲ್ಲಿ, ಅವರ ಪತ್ನಿ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ, ಹಿರಿಯ ಪುತ್ರ ಮತ್ತು ಆರೋಗ್ಯ ಸಚಿವ ತೇಜ್ ಪ್ರತಾಪ್, ಉಪಮುಖ್ಯಮಂತ್ರಿ ಮತ್ತು ಕಿರಿಯ ಪುತ್ರ ತೇಜಸ್ವಿ ಮತ್ತು ರಾಜ್ಯಸಭಾ ಸದಸ್ಯೆ-ಪುತ್ರಿ ಮೀಸ ಭಾರತಿ ಆರ್ ಜೆ ಡಿ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆಗಳಲ್ಲಿ ಪಾಲ್ಗೊಂಡರು.

೬೯ ಪೌಂಡ್ ತೂಕದ ಕೇಕ್ ಕತ್ತರಿಸಿ, ಅವರನ್ನು ಹರಸಲು-ಶುಭ ಕೋರಲು ಬಂದ ಎಲ್ಲರಿಗೂ ಲಾಲು ಸಿಹಿ ಹಂಚಿದರು.

"ಸುಮಾರು ೨೦ ವರ್ಷಗಳ ನಂತರ ಇಂತಹ ಸಂಭ್ರಮದ ಆಚರಣೆ ನಡೆದಿದೆ. ಆರ್ ಜೆ ಡಿ ಅಧಿಕಾರದಲ್ಲಿದ್ದ ೨೦೦೫ರ ಹಿಂದಿನ ದಿನಗಳನ್ನು ನೆನಪಿಸುತ್ತಿದೆ" ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಲಾಲು ಅವರನ್ನು ಭೇಟಿ ಮಾಡಿ ಶುಭ ಕೋರಿದ್ದಾರೆ.

೧೯೯೦ ರಲ್ಲಿ ಮುಖ್ಯಮಂತ್ರಿಯಾದಾಗಿಲಿಂದಲೂ ತಮ್ಮ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳುತ್ತಿರುವುದಾಗಿ ಹೇಳಿದ ಲಾಲು ಪ್ರಸಾದ್, ಹುಟ್ಟಿದ ದಿನ ನಿಖರವಾಗಿ ತಿಳಿದಿಲ್ಲ ಆದರೆ ಶಾಲೆಯ ದಾಖಲಾತಿಗಳಲ್ಲಿ ಜೂನ್ ೧೧ ಎಂದು ನಮೂದಿಸಲಾಗಿದೆ ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

SCROLL FOR NEXT