ಪ್ರಧಾನ ಸುದ್ದಿ

1984 ರ ಸಿಖ್ ವಿರೋಧಿ ದಂಗೆಯ ಪ್ರಕರಣದ ಬಗ್ಗೆ ಕೇಂದ್ರದ ಎಸ್ ಐ ಟಿಯಿಂದ ಮರು ತನಿಖೆ

Srinivas Rao BV

ನವದೆಹಲಿ: ಕೇಂದ್ರ ಸರ್ಕಾರದ ವಿಶೇಷ ತನಿಖಾ ತಂಡ(ಎಸ್ ಐಟಿ) 1984 ರ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದ 75 ಪ್ರಕರಣಗಳನ್ನು ಮರುತನಿಖೆ ನಡೆಸಲಿದೆ.

ದಂಗೆಗೆ ಸಂಬಂಧಿಸಿದ 75 ಪ್ರಕರಣಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಧಾನಿಗೆ ಪತ್ರ ಬರೆದ ಬೆನ್ನಲ್ಲೇ ಎಸ್ಐಟಿ ಪ್ರಕರಣಗಳ ಮರುತನಿಖೆ ನಡೆಸಲು ತೀರ್ಮಾನಿಸಿದ್ದು, ಶೀಘ್ರವೇ ಮರುತನಿಖೆ ನಡೆಸಲಿದೆ.

2015 ರ ಫೆ.13 ರಂದು ರಚಿಸಲಾಗಿದ್ದ ವಿಶೇಷ ತನಿಖಾ ತಂಡ ಈ ವರೆಗೂ ಒಂದೇ ಒಂದು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಅಷ್ಟೇ ಅಲ್ಲದೇ ದೆಹಲಿ ಸರ್ಕಾರ ಪರಿಣಾಮಕಾರಿ ತನಿಖಾ ತಂಡ ರಚಿಸದಂತೆ ತಡೆಯಲು ಕೇಂದ್ರ ಸರ್ಕಾರ ದೆಹಲಿ ವಿಧಾನಸಭಾ ಚುನಾವಣೆಗೂ ಎರಡು ದಿನಗಳ ಮುನ್ನ ತನಿಖಾ ತಂಡವನ್ನು ರಚಿಸಿತ್ತು. ಒಂದೋ ನೀವು ಎಸ್ ಐಟಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಿ ಇಲ್ಲವೇ ನಮಗೆ ಪರಿಣಾಮಕಾರಿಯಾದ ಎಸ್ ಐಟಿ ರಚಿಸಲು ಅವಕಾಶ ನೀಡಿ ಎಂದು ಆಗ್ರಹಿಸಿ ಅರವಿಂದ್ ಕೇಜ್ರಿವಾಲ್ ಪ್ರಧಾನಿಗೆ ಪತ್ರ ಬರೆದಿದ್ದರು.

SCROLL FOR NEXT