ಪ್ರಧಾನ ಸುದ್ದಿ

ಗುಲ್ಬರ್ಗ್ ಹತ್ಯಾಕಾಂಡ ತೀರ್ಪು ನಿರಾಶೆ ತರಿಸಿದೆ: ಶ್ರೀಕುಮಾರ್

Guruprasad Narayana

ತಿರುವನಂತಪುರಂ: ೬೯ ಜನ ಮೃತಪಟ್ಟ ೨೦೦೨ರ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ತಪ್ಪಿತಸ್ಥರಿಗೆ ನೀಡಿರುವ ಶಿಕ್ಷೆಯ ಪ್ರಮಾಣದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಹಿರಿಯ ಗುಜರಾತ್ ಪೊಲೀಸ್ ಅಧಿಕಾರಿ ಆರ್ ಬಿ ಶ್ರೀಕುಮಾರ್ ತೀರ್ಪು ನಿರಾಶೆಗೊಳಿಸಿದೆ ಎಂದಿದ್ದಾರೆ.

"ಈ ತೀರ್ಪು ನಿರಾಶೆ ತರಿಸಿದೆ ಮತ್ತು ದುಃಖವನ್ನೂ" ಎಂದು ಶ್ರೀಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

"ನೋಡಿ, ೬೯ ಜನ ಪ್ರಾಣ ಕಳೆದುಕೊಡಿದ್ದಾರೆ ಆದರೆ ಕೇವಲ ೧೧ ಜನಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದು ತಪ್ಪು" ಎಂದು ಕೇರಳ ಮೂಲದ, ಗುಜರಾತ್ ನ ಗಾಂಧಿನಗರ ನಿವಾಸಿ ಶ್ರೀಕುಮಾರ್ ಹೇಳಿದ್ದಾರೆ.

ಈ ಘಟನೆ ನಡೆದಾದ ಶ್ರೀಕುಮಾರ್ ಗುಜರಾತ್ ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದರು.

ಈ ಹತ್ಯಾಕಾಂಡದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ೨೪ ಜನರಲ್ಲಿ ೧೧ ಜನರಿಗೆ ಜೀವಾವಧಿ ಶಿಕ್ಷೆ ನೀಡಿ ಅಹಮದಾಬಾದ್ ನ ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿದೆ. ಈ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಪಕ್ಷದ ಸಂಸದ ಎಹ್ಸಾನ್ ಜಾಫ್ರಿ ಅವರೂ ಸೇರಿದಂತೆ ೬೯ ಜನ ಮೃತಪಟ್ಟಿದ್ದರು.

೧೨ ತಪ್ಪಿತಸ್ಥರಿಗೆ ಏಳು ವರ್ಷ ಜೈಲು ಶಿಕ್ಷೆಯಾಗಿದ್ದು ಒಬ್ಬನಿಗೆ ೧೦ ವರ್ಷ ಜೈಲು ಶಿಕ್ಷೆಯಾಗಿದೆ.



SCROLL FOR NEXT