ಮುಜಫರನಗರ: 2013ರ ಮುಜಫರನಗರ ಕೋಮು ಗಲಭೆಗಳಿಂದ ತನ್ನ ಮೂಲ ಗ್ರಾಮದಿಂದ ಸ್ಥಳಾಂತರಗೊಂಡಿದ್ದ 35 ವರ್ಷದ ಗರ್ಭಿಣಿ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ ಅವರು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದ್ದು, ಮುಖ್ಯ ಆರೋಗ್ಯ ಅಧಿಕಾರಿ ಇದರ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಈ ಘಟನೆ ನೆನ್ನೆ ನಡೆದಿದ್ದು, ಖಾಂಡ್ಲಾ ನಗರದ ಸರ್ಕಾರಿ ಪ್ರಾಥಮಿಕ ಕೇಂದ್ರಕ್ಕೆ ಗರ್ಭಿಣಿ ಮಹಿಳೆಯನ್ನು ದಾಖಲಿಸಕೊಳ್ಳಲು ವೈದ್ಯರು ನಿರಾಕರಿಸಿದರು ಎಂದು ಅವರ ಪತಿ ದೂರಿದ್ದಾರೆ.
ಗರ್ಭಿಣಿ ಮಹಿಳೆಯ ಜನನ ನೀಡಬೇಕಿದ್ದ ದಿನಕ್ಕೆ ಇನ್ನೂ ಮೂರು ದಿನಗಳು ಬಾಕಿಯಿವೆ ಎಂದು ಮನೆಗೆ ಹಿಂದಿರುಗಲು ವೈದ್ಯರು ತಿಳಿಸಿದರು ಎಂದು ಅವರು ದೂರಿದ್ದಾರೆ.
ಮನೆಗೆ ಹಿಂದಿರುಗಬೇಕಾದರೆ ರಸ್ತೆಯಲ್ಲೇ ತಮ್ಮ ಪತ್ನಿ ಮಗುವಿಗೆ ಜನನ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ನಂತರ ಮುಖ್ಯ ಆರೋಗ್ಯ ಅಧಿಕಾರಿ ವಿ ಅಗ್ನಿಹೋತ್ರಿ ಅವರ ಆದೇಶದ ಮೇರೆಗೆ ಮಹಿಳೆಯನ್ನು ಶಾಮ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ. ಹಾಗೂ ಈ ಘಟನೆಯ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.
ಕೋಮು ಗಲಭೆಯ ವೇಳೆಯಲ್ಲಿ ತಮ್ಮ ಮೂಲ ಗ್ರಾಮ ಫುಗಾನದಿಂದ ಖಾಂಡ್ಲಾ ಪಟ್ಟಣಕ್ಕೆ ಸ್ಥಳಾಂತರಗೊಂಡಿದ್ದಾಗಿ ಮಹಿಳೆ ಹೇಳಿದ್ದಾರೆ.