ಪ್ರಧಾನ ಸುದ್ದಿ

ಇತಿಹಾಸ ಬರೆದ ಭಾರತ; ಏಕಕಾಲಕ್ಕೆ 20 ಉಪಗ್ರಹಗಳ ಉಡಾವಣೆ

Srinivasamurthy VN

ಶ್ರೀಹರಿಕೋಟಾ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದು, ಗೂಗಲ್ ನಿರ್ಮಿತ ಉಪಗ್ರಹ ಸೇರಿದಂತೆ ಏಕಕಾಲಕ್ಕೆ ಬರೊಬ್ಬರಿ  20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮೂಲಕ ದಾಖಲೆ ನಿರ್ಮಾಣ ಮಾಡಿದೆ.

ಆಂಧ್ರ ಪ್ರದೇಶದಶ ಶ್ರೀಹರಿಕೋಟಾದಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ ಎಲ್ ವಿ-ಸಿ34 ಉಡಾವಣಾ ವಾಹಕವವನ್ನು ಇಂದು ಬೆಳಗ್ಗೆ 9.26ರಲ್ಲಿ ಉಡಾವಣೆ  ಮಾಡಲಾಗಿದ್ದು, ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಪಿಎಸ್ ಎಲ್ ವಿ ಸಿ-34 ಉಡಾವಣಾ ವಾಹಕ ಎಲ್ಲ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಆ ಮೂಲಕ ಏಕಕಾಲಕ್ಕೆ  ಬರೊಬ್ಬರಿ 20 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಇಸ್ರೋ ಒಂದೇ ರಾಕೆಟ್‌ನಲ್ಲಿ ಅತಿ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ವಿಶ್ವದ 2ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ  ಪಾತ್ರವಾಗಿದೆ.

SCROLL FOR NEXT