ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಶಿಕ್ಷಣದ ಮಾಹಿತಿ ಕಲೆಹಾಕಲು ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ ಮುಂದಾಗಿದ್ದಾರೆ. ಕೇಜ್ರಿವಾಲ್ 1980 ರಲ್ಲಿ ಬಿ ಟೆಕ್ ಪದವಿ ಪಡೆದ ಶಿಕ್ಷಣ ಸಂಸ್ಥೆ ಐ ಐ ಟಿ ಖರಗ್ ಪುರದಿಂದ (ದೆಹಲಿ) ಅವರ ಪ್ರವೇಶ ಪ್ರಕ್ರಿಯೆಯ ಮಾಹಿತಿ ಕೋರಿ ಮಾಹಿಕಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸ್ವಾಮಿ, ಆರ್ ಟಿ ಐ ಅರ್ಜಿಗೆ ಬಂದಿರುವ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ಸ್ಪರ್ಧಾತ್ಮಕ ಪರೀಕ್ಷೆ ಜೆ ಇ ಇ ಮುಂತಾದ ಪರೀಕ್ಷೆಗಳಲ್ಲಿ ಗಳಿಸಿರುವ ರ್ಯಾಂಕ್ ಮತ್ತು ಬಿ ಟೆಕ್ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದ ಪ್ರಕ್ರಿಯೆ ವಿಷಯವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಂಸ್ಥೆ ಇದರ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದಿದೆ. ಕೇಜ್ರಿವಾಲ್ ವಿದ್ಯಾಭ್ಯಾಸ ಮಾಡಿದ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಸರಣಿ ಸಂಖ್ಯೆ, ಅವರು ವಿದ್ಯಾಭ್ಯಾಸ ಮಾಡಿದ ವರ್ಷ ಇತ್ಯಾದಿ ಮಾಹಿತಿಗಳನ್ನು ಬಹಿರಂಗಪಡಿಸಿದ್ದು ವಿವಿಧ ವಿಷಯಗಳಲ್ಲಿ ಕೇಜ್ರಿವಾಲ್ ಗಳಿಸಿದ ಅಂಕ-ಗ್ರೇಡ್ ಪಟ್ಟಿಯನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಇದು ಆರ್ ಟಿ ಸುಪರ್ದಿಗೆ ಒಳಪಡುವುದಿಲ್ಲ.
ಮೊದಲಿನಿಂದಲೂ ಸುಬ್ರಮಣ್ಯ ಸ್ವಾಮಿ ದೆಹಲಿ ಮುಖ್ಯಮತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ.