ಹೊಸಕೋಟೆ ಡೇರಿ ಮತ್ತು ಉತ್ಪಾದನ ಘಟಕ ಉದ್ಘಾಟಿಸುತ್ತಿರುವ ಸಿಎಂ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣದ ಮಧ್ಯೆ ರೈತನೊಬ್ಬ ಮಹಿಳೆಯರನ್ನು ನೋಡಿ ಸೌಲತ್ತುಗಳನ್ನು ಕೊಡಬೇಡಿ ಎಂದು ಮನವಿ ಮಾಡಿದ ಘಟನೆ ಗುರುವಾರ ನಡೆಯಿತು.
ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘಗಳ ಒಕ್ಕೂಟ ಆಯೋಜಿಸಿದ್ದ ಹೊಸಕೋಟೆ ಡೇರಿ ಮತ್ತು ಉತ್ಪಾದನ ಘಟಕ ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ, ರೈತರಿಗೆ ಪ್ರತಿ ಲೀಟರ್‌ಗೆ ನೀಡುತ್ತಿರುವ 4 ರುಪಾಯಿ ಸಹಾಯ ಧನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದರು. ಅಲ್ಲದೆ ಹೈನುಗಾರರ ಹಾಲಿಗೆ ಬೆಂಬಲ ಬೆಲೆ ನೀಡಿದ್ದನ್ನು ಮಹಿಳೆಯರು ನೆನಪಿಡುತ್ತಾರೆ ಆದರೆ ಪುರುಷರು ಮರೆಯುತ್ತಾರೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ರೈತರೊಬ್ಬರು, ಸಾರ್ ಮಹಿಳೆಯರನ್ನು ನೋಡಿ ನೇರವು ನೀಡಬೇಡಿ ಎಂದರು.
ರೈತನ ಮನವಿಗೆ ವಿನಯದಿಂದಲೇ ಉತ್ತರಿಸಿದ ಸಿದ್ದರಾಮಯ್ಯ, ಯೇ ತಮ್ಮಾ ನಿಮ್ಮನ್ನೂ ನೋಡಿ ಕೋಡ್ತೇವಪ್ಪಾ, ಮಹಿಳೆ ಇಲ್ಲದೇ ನೀನೊಬ್ನೆ ಇದ್ದೀಯೇನಪ್ಪಾ ಎಂದು ಪ್ರಶ್ನಿಸಿದರು. ಇದೇ ವೇಳೆ 'ಮಹಿಳೆ ಎಂದರೆ ಕುಟುಂಬ ಎಂದರ್ಥ' ಎಂದರು .
ಇದೇ ವೇಳೆ ಕೆಎಎಫ್ ಕಳಪೆ ಸ್ವೀಟ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ಕೆಎಂಎಫ್ ಉತ್ಪನ್ನಗಳ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಿ. ರಾಮನಗರ ಮತ್ತು ಗುರು ಸ್ಟಾಲ್ ನಲ್ಲಿ ಸಿಗುವ ಮೈಸೂರು ಪಾಕ್ ನ ರುಚಿ ನೋಡಿ. ನೀವು ಆ ರೀತಿಯ ಸ್ವೀಟ್ ಅನ್ನು ಸಿದ್ಧಪಡಿಸಿ. ನಾವು ಅಮೂಲ್‌ಗೆ ಪೈಪೋಟಿ ಒಡ್ಡುವ ಮಟ್ಟಿನಲ್ಲಿ ಬೆಳೆಯಬೇಕು ಎಂದು ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics