ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ 
ಪ್ರಧಾನ ಸುದ್ದಿ

ರಾಜೀವ್ ಹಂತಕರ ಬಿಡುಗಡೆ ಕೋರಿದ ತಮಿಳುನಾಡು ಅರ್ಜಿಯನ್ನು ಪರಿಶೀಲಿಸುತ್ತಿದ್ದೇವೆ: ರಾಜನಾಥ್

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಎಲ್ಲರ ಬಿಡುಗಡೆಗಾಗಿ ತಮಿಳು ನಾಡು ಸರ್ಕಾರ ಮಾಡಿರುವ ಮನವಿ ಅರ್ಜಿಯನ್ನು ಪರಿಶೀಲಿಸಲಾಗುತ್ತಿದೆ

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಎಲ್ಲರ ಬಿಡುಗಡೆಗಾಗಿ ತಮಿಳು ನಾಡು ಸರ್ಕಾರ ಮಾಡಿರುವ ಮನವಿ ಅರ್ಜಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.

"ನಾವು ನೆನ್ನೆ ಪತ್ರವನ್ನು ಪಡೆದಿದ್ದೇವೆ ಮತ್ತು ಸರ್ಕಾರ ಅದನ್ನು ಪರಿಶೀಲಿಸುತ್ತಿದೆ. ಈ ವಿಷಯದಲ್ಲಿ ಅಪೆಕ್ಸ್ ಕೋರ್ಟ್ ಈಗಾಗಲೇ ತೀರ್ಪು ನಿಡಿದೆ. ಈಗ ಇದು ಅಪೆಕ್ಸ್ ಕೋರ್ಟ್ ನ ತೀರ್ಪಿಗೆ ಬದ್ಧವಾಗಿರುವ ಸಾಂವಿಧಾನಿಕ ಮತ್ತು ನೈತಿಕ ಜವಾಬ್ದಾರಿ" ಎಂದು ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮುಂಚಿತವಾಗಿ ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ತಮಿಳು ನಾಡಿನ ಈ ಮನವಿಯನ್ನು ಪುರಸ್ಕರಿಸದಿರಲು ಆಗ್ರಹಿಸಿದ್ದಾರೆ.

"ಈ ಪತ್ರಕ್ಕೆ ಯಾವುದೇ ಮಹತ್ವ ನೀಡಬಾರದು. ಹಂತಕರನ್ನು ಬಿಡುಗಡೆ ಮಾಡಬಾರದು" ಎಂದು ಅವರು ಹೇಳಿದ್ದಾರೆ.

ಎಲ್ಲ ಏಳು ತಪ್ಪಿತಸ್ಥರನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ತಮಿಳು ನಾಡು ಸರ್ಕಾರ ಬುಧವಾರ ಕೇಳಿದೆ. ಈಗಾಗಲೇ ಈ ತಪ್ಪಿತಸ್ಥರು ೨೪ ವರ್ಷ ಜೈಲು ಸಜೆ ಪೂರ್ಣಗೊಳಿಸಿರುವುದರಿಂದ ಅವರ ಬಿಡುಗಡೆಗಾಗಿ ಸರ್ಕಾರ ಅರ್ಜಿ ಸ್ವೀಕರಿಸಿದೆ ಎಂದು ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಕೆ ಜ್ಞಾನದೇಶಿಕನ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಷಿ ಅವರಿಗೆ ಪತ್ರ ಬರೆದಿದ್ದಾರೆ.

ಈ ಏಳು ಜನ ತಪ್ಪಿತಸ್ಥರು ವಿ ಶ್ರೀಹರನ್ ಅಲಿಯಾಸ್ ಮುರುಗನ್, ಟಿ ಸುಥೇಂದ್ರರಾಜ ಅಲಿಯಾಸ್ ಸಂತಾನ್, ಎ ಜಿ ಪೆರಾರಿವಾಲನ್, ಜಯಕುಮಾರ್, ರಾಬರ್ಟ್ ಪಾಯಸ್, ರವಿಚಂದ್ರನ್ ಮತ್ತು ನಳಿನಿ ಶ್ರೀಹರನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!