ಟಿಡಿಪಿ ಸೇರಿದ ವೈಎಸ್ಆರ್ ಕಾಂಗ್ರೆಸ್ ನ 8ನೇ ಶಾಸಕ
ಜಗನಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ ತೊರೆಯುವ ಶಾಸಕರ ಪರ್ವ ಮುಂದುವರೆದಿದ್ದು,...
ವಿಜಯವಾಡ: ಆಂಧ್ರಪ್ರದೇಶದಲ್ಲಿ ಜಗನಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ ತೊರೆಯುವ ಶಾಸಕರ ಪರ್ವ ಮುಂದುವರೆದಿದ್ದು, ಶುಕ್ರವಾರ ವೈಎಸ್ಆರ್ ನ 8ನೇ ಶಾಸಕ ಆಡಳಿತರೂಢ ಟಿಡಿಪಿ ಸೇರ್ಪಡೆಯಾಗಿದ್ದಾರೆ.
ಶ್ರೀಕಾಕುಲಂ ಜಿಲ್ಲೆಯ ಪಟಪಣ್ಣಂ ಕ್ಷೇತ್ರದ ವೈಎಸ್ಆರ್ ಕಾಂಗ್ರೆಸ್ ಶಾಸಕ ಕೆ.ವಿ.ರಮಣಮೂರ್ತಿ ಅವರು ಇಂದು ಸಚಿವ ಅಚ್ಚನಾಯ್ಡು ಹಾಗೂ ತಮ್ಮ ಬೆಂಬಲಿಗರೊಂದಿಗೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ನಿವಾಸಕ್ಕೆ ತೆರಳಿ ಅಧಿಕೃತವಾಗಿ ಟಿಡಿಪಿ ಸೇರಿದರು.
ಈ ಹಿಂದೆ ಟಿಡಿಪಿಯಲ್ಲೇ ಇದ್ದ ರಮಣಮೂರ್ತಿ 2014ರ ಲೋಕಸಭೆ ಚುನಾವಣೆ ವೇಳೆ ಪಕ್ಷ ತೊರೆದು ವೈಎಸ್ಆರ್ ಕಾಂಗ್ರೆಸ್ ಸೇರಿದ್ದರು. ಇದೀಗ ಮತ್ತೆ ಪಕ್ಷಕ್ಕೆ ಮರಳಿದ್ದಾರೆ.
ಕಳೆದ ಫೆಬ್ರವರಿ 22ರಿಂದ ಇದುವರೆಗೆ ವೈಎಸ್ಆರ್ ಕಾಂಗ್ರೆಸ್ ನಿಂದ ಒಟ್ಟು 8 ಶಾಸಕರು ಹಾಗೂ ಓರ್ವ ಎಂಎಲ್ ಸಿ ಪಕ್ಷ ತೊರೆದು ಟಿಡಿಪಿ ಸೇರಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.