ಚಂದ್ರಶೇಖರ್ ಆಜಾದ್ ರ ಸೋದರ ಸಂಬಂಧಿ ಪಂಡಿತ್ ಸುಜಿತ್ ಆಜಾದ್ 
ಪ್ರಧಾನ ಸುದ್ದಿ

ದೇಶಕ್ಕೆ ಅಗೌರವ ತೋರಿದವರ ಶಿರಚ್ಛೇದ ಮಾಡುತ್ತೇವೆ: ಚಂದ್ರಶೇಖರ್ ಆಜಾದ್ ರ ಸೋದರ ಸಂಬಂಧಿ

ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತ್ರಿಕಾರಿ ಚಂದ್ರಶೇಖರ್ ಆಜಾದ್ ರ ಸೋದರ ಸಂಬಂಧಿ ಮೊಮ್ಮಗ ದೇಶವಿರೋಧಿ ಘೋಷಣೆ ಕೂಗುವವರಿಗೆ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ: ದೇಶದ್ರೋಹದ ಆರೋಪದಡಿ ಬಂಧನಕ್ಕೊಳಗಾಗಿ ಬಿಡುಗಡೆಯಾಗಿರುವ ಕನ್ಹಯ್ಯ ಕುಮಾರ್ ಸುದ್ದಿಯಲ್ಲಿರುವಾಗಲೇ, ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತ್ರಿಕಾರಿ ಚಂದ್ರಶೇಖರ್ ಆಜಾದ್ ರ ಸೋದರ ಸಂಬಂಧಿ ಮೊಮ್ಮಗ ದೇಶವಿರೋಧಿ ಘೋಷಣೆ ಕೂಗುವವರಿಗೆ ಎಚ್ಚರಿಕೆ ನೀಡಿದ್ದಾರೆ.
ತಪ್ಪು ದಾರಿಯಲ್ಲಿ ಸಾಗುತ್ತಿರುವ ಕೆಲವು ಯುವಕರು ದೇಶಕ್ಕೆ ಹಾನಿಯುಂಟುಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಆಜಾದ್ ರ ಸೋದರ ಸಂಬಂಧಿ ಮೊಮ್ಮಗ ಪಂಡಿತ್ ಸುಜಿತ್ ಆಜಾದ್, ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರು ಹಾಗೂ ದೇಶಕ್ಕೆ ಅಗೌರವ ತೋರುವವರ ಶಿರಚ್ಛೇದ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಚಂದ್ರಶೇಖರ್ ಆಜಾದ್ ಹಾಗೂ ಅವರ ಕ್ರಾಂತಿಕಾರಿ ಸಹೋದರರು ಸ್ವರಾಜ್ಯದ ಕನಸು ಕಂಡಿದ್ದರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದರು ನನ್ನ ತಲೆಯನ್ನು ಕೊಡುತ್ತೇನೆಯೇ ಹೊರತು ಭಾರತ ವಿರೋಧಿ ಶಕ್ತಿಗಳೆದುರು ತಲೆ ತಗ್ಗಿಸುವುದಿಲ್ಲ ಎಂದು ಪಂಡಿತ್ ಸುಜಿತ್ ಆಜಾದ್ ಹೇಳಿದ್ದಾರೆ.
ಸುಜಿತ್ ಆಜಾದ್ ಹಾಗೂ ಭಗತ್ ಸಿಂಗ್ ಬ್ರಿಗೇಡ್ ನ ಹಲವು ಸದಸ್ಯರು ಜೆಎನ್ ಯು ಆಡಳಿತ ವಿಭಾಗದ ಕಟ್ಟಡದ ಬಳಿ ರಾಷ್ಟ್ರಧ್ವಜ ಹಾರಿಸಿದ್ದಾರೆ, ಕನ್ಹಯ್ಯ ಕುಮಾರ್ ಜೆಎನ್ ಯು ನಲ್ಲಿ ದೇಶವಿರೋಧಿ ಘೋಷಣೆ ಕೂಗಿದ್ದರ ಬಗ್ಗೆ ನನಗೆ ಸ್ಪಷ್ಟವಾಗಿ ತಿಳಿದಿಲ್ಲ ಎಂದು ಸುಜಿತ್ ಆಜಾದ್ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್