ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಶಿವರಾತ್ರಿ ವೇಳೆ ಉಗ್ರ ದಾಳಿ ಬಗ್ಗೆ ಗೊಂದಲದ ಮಾಹಿತಿ: ಸೇನಾ ಕಮಾಂಡರ್

ಶಿವರಾತ್ರಿ ಹಬ್ಬದ ವೇಳೆ ಹಾಗೂ ಸಂಸತ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಉಗ್ರ ದಾಳಿ ಮಾಡುವ ಮೂಲಕ ದೇಶದಲ್ಲಿ...

ಪಠಾಣ್ ಕೋಟ್: ಶಿವರಾತ್ರಿ ಹಬ್ಬದ ವೇಳೆ ಹಾಗೂ ಸಂಸತ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಉಗ್ರ ದಾಳಿ ಮಾಡುವ ಮೂಲಕ ದೇಶದಲ್ಲಿ ಆತಂಕ ಸೃಷ್ಟಿ ಮಾಡುವ ಗೊಂದಲದ ಮಾಹಿತಿ ಇದೆ ಎಂದು ಹಿರಿಯ ಸೇನಾ ಕಮಾಂಡರ್ ಒಬ್ಬರು ಶನಿವಾರ ಪಠಾಣ್ ಕೋಟ್ ನಲ್ಲಿ ಹೇಳಿದ್ದಾರೆ.
'ಇಂದು ರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳಿವೆ. ನಿಮಗೆ ಗೊತ್ತು ಮಹಾಶಿವರಾತ್ರಿ ಬರುತ್ತಿದ್ದು, ಈ ವೇಳೆ ಉಗ್ರರು ಆತಂಕ ಸೃಷ್ಟಿಸುವ ಗೊಂದಲದ ಮಾಹಿತಿ. ಆದರೂ ಅದನ್ನು ಕಡೆಗಣಿಸದೇ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ' ಎಂದು ಪಶ್ಚಿಮ ಸೇನಾ ಕಮಾಂಡರ್ ಲೆ.ಜನರಲ್ ಕೆ.ಜೆ.ಸಿಂಗ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ ಸೇನಾ ಅಧಿಕಾರಿ, ಮಾಧ್ಯಮಗಳ ಮೇಲೆ ಗರಿಷ್ಠ ಪ್ರಭಾವ ಸೃಷ್ಟಿಸುವ ಉದ್ದೇಶದಿಂದ ಉಗ್ರರು ಇಂತಹ ಕೃತ್ಯಗಳಿಗೆ ಸಂಚು ರೂಪಿಸಿದ್ದಾರೆ ಎಂದರು,
ಇದೇ ವೇಳೆ ಉಗ್ರರ ಇಂತಹ ಯಾವುದೇ ಕೃತ್ಯಗಳಿಗೆ ನಾವು ಜಗ್ಗುವುದಿಲ್ಲ. ಭಾರತೀಯ ಸೇನೆ ಸಂಪೂರ್ಣ ಸಂಘಟಿತವಾಗಿದೆ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ ಎಂದು ಲೆ.ಜನರಲ್ ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಶಾಕಿಂಗ್ Video: CJP ಪ್ರತಿಭಟನೆ ತಡೆಯಲು ಬ್ಯಾರಿಕೇಡ್‌ ಮಾತ್ರವಲ್ಲ, ರಸ್ತೆಯಲ್ಲಿ ಸ್ಪೈಕ್ ಸ್ಟ್ರಿಪ್‌ ಅಳವಡಿಕೆ!

ಜ್ಞಾನೇಶ್ ಕುಮಾರ್, ಪ್ರಧಾನಿ ಮೋದಿ ಇಬ್ಬರೂ ಮನೆಗೆ ಹೋಗುತ್ತಾರೆ, ನಂತರ ಪ್ರಜಾಪ್ರಭುತ್ವದ ದುರಸ್ತಿ: ರಾಹುಲ್ ಗಾಂಧಿ

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?