ಶನಿ ಶಿಂಗಾಪುರ್ ದೇವಾಲಯವನ್ನು ಹೊಕ್ಕಲು ಪ್ರಯತ್ನಿಸಿದ್ದ ತೃಪ್ತಿ ದೇಸಾಯಿ ನೇತೃತ್ವದ ಮಹಿಳಾ ಕಾರ್ಯಕರ್ತರನ್ನು ತಡೆದಿದ್ದ ಸಂದರ್ಭ 
ಪ್ರಧಾನ ಸುದ್ದಿ

ಮಹಾರಾಷ್ಟ್ರದ ಶಿವದೇವಾಲಯಕ್ಕೆ ಪ್ರವೇಶ ಕೋರಿದ ಮಹಿಳಾ ಕಾರ್ಯಕರ್ತರು

ಟ್ರಿಂಬಕೇಶ್ವರ ಶಿವ ದೇವಾಲಯದ ಗರ್ಭ ಗುಡಿ ಹೊಕ್ಕಲು, ಮಹಿಳಾ ಸಂಘ ಭೂಮಾತಾ ರನ್ರಾಗಿನಿ ಬ್ರಿಗೇಡ್ (ಬಿ ಆರ್ ಬಿ)ನ 200 ಸದಸ್ಯರು ನಾಸಿಕ್ ನತ್ತ ಹೊರಟಿದ್ದಾರೆ ಎಂದು

ಪುಣೆ: ಟ್ರಿಂಬಕೇಶ್ವರ ಶಿವ ದೇವಾಲಯದ ಗರ್ಭ ಗುಡಿ ಹೊಕ್ಕಲು, ಮಹಿಳಾ ಸಂಘ ಭೂಮಾತಾ ರನ್ರಾಗಿನಿ ಬ್ರಿಗೇಡ್ (ಬಿ ಆರ್ ಬಿ)ನ 200 ಸದಸ್ಯರು ನಾಸಿಕ್ ನತ್ತ ಹೊರಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿಯವರೆಗೂ ಆ ದೇವಾಲಯದ ಗರ್ಭಗುಡಿಗೆ ಪುರುಷರಿಗೆ ಮಾತ್ರ ಪ್ರವೇಶವಿದ್ದು, ಇದನ್ನು ಈ ಮಹಿಳಾಕ್ರಕರ್ತರು ವಿರೋಧಿಸಿದ್ದಾರೆ.

ದೇಶದಾದ್ಯಂತ ಭಕ್ತಾದಿಗಳು ಸೋಮವಾರ ಮಹಾ ಶಿವರಾತ್ರಿ ಆಚರಿಸುತ್ತಿದ್ದಾರೆ. ೧೨ ಜ್ಯೋತಿರ್ಲಿಂಗಗಳನ್ನು ಒಳಗೊಂಡ ಟ್ರಿಂಬಕೇಶವರ ಪ್ರಮುಖ ಶಿವ ದೇವಾಲಯಗಳಲ್ಲಿ ಒಂದು.

"ದೇವಾಲಯಗಳ ಗರ್ಭ ಗುಡಿಯನ್ನು ಹೊಕ್ಕಲು ಮಹಿಳೆಯರಿಗೆ ನಿಷೇಧವೇಕೆ? ಯಾವುದೇ ಪೂಜಾಗೃಹವನ್ನು ಹೊಕ್ಕಲು ನಮಗೆ ಸಾಂವಾಧಾನಿಕ ಹಕ್ಕಿದೆ. . ಈ ಮಹಾಶಿವರಾತ್ರಿಯ ಪುಣ್ಯ ಸಮಯದಲ್ಲಿ ನಾವು ಈ ಕಾರ್ಯಕ್ಕೆ ಮುಂದಾಗಿದ್ದೇವೆ" ಎಂದು ಬಿ ಆರ್ ಬಿಯ ಅಧ್ಯಕ್ಷೆ ತೃಪ್ತಿ ದೇಸಾಯಿ ನಾಸಿಕ್ ನಲ್ಲಿ ಹೇಳಿದ್ದಾರೆ.

"ಅವರು ನಮ್ಮನ್ನು ತಡೆದರೆ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ನಮಗೆ ಅವಮಾನ ಮಾಡಿದಂತೆ" ಎಂದು ಅವರು ತಿಳಿಸಿದ್ದಾರೆ.

ದೇವಾಲಯದಲ್ಲಿ ಯಾವುದೇ ಘರ್ಷಣೆ ನಡೆಯದಂತೆ ತಡೆಯಲು ನಾಸಿಕ್ ಪೊಲೀಸರು ಮತ್ತು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಈ ಮಧ್ಯೆ ಬಿ ಆರ್ ಬಿ ಸಂಘದ ಈ ಕ್ರಮವನ್ನು ಟೀಕಿಸಿರುವ ನಾಸಿಕ್ ಮೂಲದ ಕೆಲವು ಮಹಿಳಾ ಸಂಘಟನೆಗಳು, ದೇವಾಲಯದ ಸಂಪ್ರದಾಯವನ್ನು ಉಳಿಸಿಕೊಳ್ಳಲು ಆಗ್ರಹಿಸಿವೆ.

ಈ ಹಿಂದೆ ಮಹಾರಾಷ್ಟ್ರದ ಅಹೆಮದಾನಗರ್ ಜಿಲ್ಲೆಯ ಶನಿ ಶಿಂಗಾಪುರ್ ದೇವಾಲಯವನ್ನು ಹೊಕ್ಕಲು ತೃಪ್ತಿ ದೇಸಾಯಿ ನೇತೃತ್ವದ ೫೦೦ ಬಿ ಆರ್ ಬಿ ಮಹಿಳಾ ಕಾರ್ಯಕರ್ತರು ಪ್ರಯತ್ನಿಸಿದ್ದರು. ಆದರೆ ಅವರನ್ನು ಅಲ್ಲಿ ತಡೆಯಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT