ನಾಸಿಕ್: ಮಹಿಳೆಯರಿಗೆ ನಿಷೇಧವಿರುವ ಮಹಾರಾಷ್ಟ್ರದ ನಾಸಿಕ್ ನ ತ್ರಯಂಬಕೇಶ್ವರ ದೇವಾಲಯದ ಗರ್ಭಗುಡಿಗೆ ಹೊಕ್ಕಲು ತೆರಳಿದ್ದ ತೃಪ್ತಿ ದೇಸಾಯಿ ನೇತೃತ್ವದ ಭೂಮಾತಾ ಬ್ರಿಗೇಡ್ ಕಾರ್ಯಕರ್ತರನ್ನು ನಂದೂರ್ ಶಿಂಗೋಟ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೇವಾಲಯ ಪ್ರವೇಶಕ್ಕೆ ಪ್ರಯತ್ನಿಸಿದ್ದ ಮಹಿಳಾ ಕಾರ್ಯಕ್ರತರನ್ನು ನೆನ್ನೆ ಕೂಡ ವಶಪಡಿಸಿಕೊಂಡ ಪೊಲೀಸರು ನಂತರ ಬಿಡುಗಡೆ ಮಾಡಿದ್ದಾರೆ.
"ಟ್ರಿಬಂಕೇಶ್ವರ ದೇವಾಲಯದ ಒಳಹೋಗುವುದರಿಂದ ನಮ್ಮನ್ನು ತಡೆಯುತ್ತಿರುವುದೇಕೆ? ಪೊಲೀಸರು ಮಾಡಿದ್ದು ತಪ್ಪು" ಎಂದು ದೇಸಾಯಿ ಪ್ರಶ್ನಿಸಿದ್ದಾರೆ.
ಪ್ರಾಚೀನ ಸಂಪ್ರದಾಯದ ಪ್ರಕಾರ ತ್ರಯಂಬಕೇಶ್ವರ ದೇವಾಲಯದ ಗರ್ಭಗುಡಿಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಇದನ್ನು ಪ್ರಶ್ನಿಸಿ, ಸಂವಿಧಾನ ನೀಡಿರುವ ಹಕ್ಕಿನಂತ ನಮಗೆ ಒಳ ಹೋಗಲು ಪ್ರವೇಶವಿದೆ ಎಂದು ಭೂಮಾತ ಬ್ರಿಗೇಡಿನ ಸದಸ್ಯರು ಮಹಾ ಶಿವರಾತ್ರಿಯಂದು ದೇವಾಲಯವನ್ನು ಒಳಹೊಕ್ಕಲು ಪ್ರಯತ್ನಿಸಿದ್ದರು.
ಈ ಹಿಂದೆ ಮಹಾರಾಷ್ಟ್ರದ ಶನಿ ದೇವಾಲಯಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದ ತೃಪ್ತಿ ದೇಸಾಯಿ ನೇತೃತ್ವದ ಮಹಿಳಾ ಕಾರ್ಯಕರ್ತರನ್ನು ತಡೆಯಲಾಗಿತ್ತು.