ಪ್ರಧಾನ ಸುದ್ದಿ

ಕ್ಯಾನ್ಬೆರ್ರಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಭಾರತೀಯ ವಿದ್ವಾಂಸ

Guruprasad Narayana

ಮೆಲ್ಬರ್ನ್: ಖ್ಯಾತ ಭಾರತೀಯ ವಿದ್ವಾಂಸ ಮತ್ತು ಸಸ್ಯಶಾಸ್ತ್ರಜ್ಞ ಎಚ್ ದೀಪ್ ಸೈನಿ ಅವರನ್ನು ಪ್ರಖ್ಯಾತ ಕ್ಯಾನ್ಬೆರ್ರಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಿಸಲಾಗಿದೆ.

ಸದ್ಯಕ್ಕೆ ೬೦ ವರ್ಷದ ಸೈನಿ ಕೆನಡಾದ ಟೊರಂಟೊ ವಿಶ್ವವಿದ್ಯಾಲಯದ ಉಪಾಧ್ಯಕ್ಷರಾಗಿದ್ದು, ನೂತನ ಹುದ್ದೆಯಲ್ಲಿ ಸ್ಟೀಫನ್ ಪಾರ್ಕರ್ ಅವರನ್ನು ಬದಲಿಸಲಿದ್ದಾರೆ.

"ಅಂತರಾಷ್ಟ್ರೀಯ ಖ್ಯಾತಿಯ ವಿಶ್ವವಿದ್ಯಾಲಯದ ಮುಖಂಡ ಕ್ಯಾನ್ಬೆರ್ರಾ ವಿಶ್ವವಿದ್ಯಾಲಯ ಐದನೇ ಉಪಕುಲಪತಿಗಳಾಗಿ ನೇಮಕವಾಗುತ್ತಿರುವುದು ಅತೀವ ಸಂತಸ ತಂದಿದೆ" ಎಂದು ಕುಲಪತಿ ಮತ್ತು ವಿಶ್ವವಿದ್ಯಾಲಯ ಸಮಿತಿಯ ಅಧ್ಯಕ್ಷ ಟಾಮ್ ಕಾಲ್ಮ ಎಒ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ವಿಶ್ವವಿದ್ಯಾಲಯ ಸ್ಥಾಪನೆಯಾದ ನಂತರದ ಇಂತಹ ಸೂಕ್ಷ್ಮ ಘಟ್ಟದಲ್ಲಿ ಅದನ್ನು ಮುನ್ನಡೆಸಲು ಸಿಕ್ಕಿರುವ ವಕಾಶ ನನಗೆ ಗೌರವ ಮತ್ತು ಇದಕ್ಕೆ ವಿನೀತನಾಗಿದ್ದೇನೆ" ಎಂದಿದ್ದಾರೆ ಸೈನಿ.

ಲುಧಿಯಾನಾದ ಪಂಜಾಬ್ ಕೃಷಿ ಕಾಲೇಜಿನಲ್ಲಿ ಉನ್ನತ ಪದವಿ ಪಡೆದಿದ್ದ ಸೈನಿ, ಅಡಿಲೇಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದರು. ಕ್ವೀನ್ ಎಲಿಜಬೆತ್ ೨ ಡೈಮಂಡ್ ಜುಬ್ಲೀ ಪದಕವು ಸೇರಿದಂತೆ ಸೈನಿ ಹಲವಾರು ಗೌರವಗಳಿಗೆ ಪಾತ್ರರಾಗಿದ್ದಾರೆ.

SCROLL FOR NEXT