ಉಸ್ತಾದ್ ಅಲಿ ಅಹ್ಮದ್ ಹುಸೇನ್ ಖಾನ್ 
ಪ್ರಧಾನ ಸುದ್ದಿ

ಶಹನಾಯಿ ವಾದಕ ಉಸ್ತಾದ್ ಅಲಿ ಅಹ್ಮದ್ ಹುಸೇನ್ ಖಾನ್ ನಿಧನ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಶಹನಾಯಿ ವಾದಕ ಉಸ್ತಾದ್ ಅಲಿ ಅಹ್ಮದ್ ಹುಸೇನ್ ಖಾನ್(77) ಅವರು ಬುಧವಾರ ನಿಧನರಾಗಿದ್ದಾರೆ.

ಕೋಲ್ಕತಾ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಶಹನಾಯಿ ವಾದಕ ಉಸ್ತಾದ್ ಅಲಿ ಅಹ್ಮದ್ ಹುಸೇನ್ ಖಾನ್(77) ಅವರು ಬುಧವಾರ ನಿಧನರಾಗಿದ್ದಾರೆ.
ಮೂತ್ರಪಿಂಡ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಖಾನ್ ಅವರನ್ನು ಹಲವು ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಉಸ್ತಾದ್ ಅಲಿ ಅಹ್ಮದ್ ಹುಸೇನ್ ಖಾನ್ ಅವರು ಐವರು ಪುತ್ರರು, ಐವರು ಪುತ್ರಿಯರು ಹಾಗೂ ಹಲವಾರು ಮೊಮ್ಮಕ್ಕಳನ್ನು ಅಗಲಿದ್ದಾರೆ.
ವಾರಾಣಸಿ ಶಹನಾಯಿ ಸಂಗೀತವನ್ನು ಪ್ರತಿನಿಧಿಸುತ್ತಿದ್ದ ಖಾನ್ ಅವರನ್ನು ಹಿಂದುಸ್ತಾನಿ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ 2009ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವಾರಾಣಸಿಯ ಖ್ಯಾತ ಶಹನಾಯಿ ವಾದಕರ ಕುಟುಂಬಕ್ಕೆ ಸೇರಿದ ಖಾನ್ ತಮ್ಮ ಸಂಶೋಧನಾತ್ಮಕ ಶೈಲಿ ಮತ್ತು ಶಾಸ್ತ್ರೀಯ, ಅರೆ ಶಾಸ್ತ್ರೀಯ ಮತ್ತು ಜಾನಪದ ಸಂಗೀತ ಮೇಲಿನ ಪಾರಮ್ಯಕ್ಕಾಗಿ ಜನಪ್ರಿಯರಾಗಿದ್ದರು.
ಖಾನ್ ಅವರು ಭಾರತವಲ್ಲದೆ ಬೆಲ್ಜಿಯಂ, ರಷ್ಯ, ಸ್ವಿಟ್ಜರ್ಲೆಂಡ್, ಫ್ರಾನ್ಸ್, ಟ್ಯುನೀಷಿಯ, ಸಿಂಗಾಪುರ, ಇಂಡೋನೇಷ್ಯಾ, ಹಾಂಕಾಂಗ್ ಮತ್ತು ಫಿಲಿಪ್ಪೈನ್ಸ್ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಶಹನಾಯಿ ವಾದನದ ಸವಿ ಉಣಿಸಿದ್ದರು. 1973ರಲ್ಲಿ ದೂರದರ್ಶನ ಉದ್ಘಾಟನಾ ಸಮಾರಂಭದಲ್ಲೂ ಅವರು ಶಹನಾಯಿ ವಾದನ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

ವಿಶ್ವದಾದ್ಯಂತ ಏಕಕಾಲಕ್ಕೆ 'ರಾಮಾಯಣ ಭಾಗ 1' ಬಿಡುಗಡೆ: ದಸರಾ ಹಬ್ಬದಿಂದಲೇ ಮುಂಗಡ ಬುಕಿಂಗ್‌ ಆರಂಭ!

ಇದು 'ತುರ್ತು ಪರಿಸ್ಥಿತಿಯಂತಹ ಸ್ಥಿತಿ'; ಹೋರಾಟ ಈಗಷ್ಟೇ ಆರಂಭ; ದೇಶಾದ್ಯಂತ CJP ಪ್ರತಿಭಟನೆ ನಡೆಯಲಿದೆ: ಸೌರವ್ ದಾಸ್

'ಸುಳ್ಳಿನ ದಾಳಿಯಿಂದ ನನ್ನ ಕುಗ್ಗಿಸಲು ಸಾಧ್ಯವಿಲ್ಲ': ವಾಟ್ಸಪ್ ಸ್ಟೇಟಸ್ ಮೂಲಕ HDKಗೆ ಹಾಸನ ಡಿಸಿ ಲತಾಕುಮಾರಿ ಟಾಂಗ್