ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಿದ್ದರಾಮಯ್ಯ ಇಮೇಜ್ ವೃದ್ಧಿಗಾಗಿ ಜಾಹೀರಾತು ಸಂಸ್ಥೆಗೆ ಗುತ್ತಿಗೆ!

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಇಮೇಜ್ ವೃದ್ಧಿಗೆ, ಸರ್ಕಾರದ ಕಾರ್ಯಕ್ರಮಗಳ ಜನಪ್ರಿಯತೆಯ ಪ್ರಚಾರಕ್ಕಾಗಿ ಮತ್ತು ತಮ್ಮ ಶಾಸಕರ ಜನಪ್ರಿಯತೆಯನ್ನು...

ಮುಖ್ಯಮಂತ್ರಿ ಸಿದ್ದರಾಮಯ್ಯ
Guruprasad Narayana
Updated On : 17 Mar 2016, 12:42 pm

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಇಮೇಜ್ ವೃದ್ಧಿಗೆ, ಸರ್ಕಾರದ ಕಾರ್ಯಕ್ರಮಗಳ ಜನಪ್ರಿಯತೆಯ ಪ್ರಚಾರಕ್ಕಾಗಿ ಮತ್ತು ತಮ್ಮ ಶಾಸಕರ ಜನಪ್ರಿಯತೆಯನ್ನು ಒರೆಗೆ ಹಚ್ಚಲು ಕಾಂಗ್ರೆಸ್ ಪಕ್ಷ ವೃತ್ತಿಪರ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದೆ.

ಹಬ್ಲೊಟ್ ಕೈಗಡಿಯಾರ ವಿವಾದದ ನಂತರ ಸಿದ್ಧರಾಮಯ್ಯನವರ ಜನಪ್ರಿಯತೆಗೆ ಧಕ್ಕೆಯಾಗಿರುವುದನ್ನು ಗ್ರಹಿಸಿರುವ ಕಾಂಗ್ರೆಸ್ ಪಕ್ಷ, ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ನಿರೀಕ್ಷಿತ ಫಲಿತಾಂಶ ಬರದೆ ಇರುವುದುದಕ್ಕೂ ಕಳವಳಗೊಂಡಿದ್ದು, ಇದರ ಆತ್ಮಾವಲೋಕನ ಮತ್ತು ಸರಿಪಡಿಸುವಿಕೆಗೆ ಮುಂದಾಗಿದೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಇಮೇಜ್ ಬದಲಿಸುವುದಕ್ಕೆ ದುಡಿದಿದ್ದ ಒಂದು ಸಂಸ್ಥೆಯ ಜೊತೆಗೆ ಕೂಡ ಕಾಂಗ್ರೆಸ್ ಮಾತುಕತೆ ನಡೆಸಿರುವುದು ವಿಶೇಷ. ಬ್ರ್ಯಾಂಡ್ ಮತ್ತು ರಾಜಕೀಯ ತಂತ್ರಗಳಲ್ಲಿ ಪರಿಣಿತಿ ಇರುವ ಮುಂಬೈ ಮೂಲದ ಈ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಕಾಂಗ್ರೆಸ್ ಪಕ್ಷ ಮಾತುಕತೆ ನಡೆಸಿದೆ. ೨೦೧೮ಕ್ಕೆ ಕರ್ನಾಟಕದ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದಲೂ ಈ ಮಾತುಕತೆಗಳು ಮಹತ್ವ ಪಡೆದಿವೆ.

ಸಿದ್ದರಾಮಯ್ಯನವರಿಗೆ ಆಪ್ತ ಎನ್ನಲಾದ ಚಿಕ್ಕಬಳ್ಳಾಪುರದ ಶಾಸಕ ಡಾ. ಕೆ ಸುಧಾಕರ್ ಹೇಳುವಂತೆ "ಸರ್ಕಾರದ ಯೋಜನೆಗಳನ್ನು ರಾಜ್ಯದ ಪ್ರತಿಯೊಬ್ಬರಿಗೂ ತಲುಪಿಸುವ ಮತ್ತು ಅವುಗಳನ್ನು ಜನಪ್ರಿಯಗೊಳಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಕೆಲವು ಸಂಸ್ಥೆಗಳ ಜೊತೆಗೆ ಮಾತುಕತೆ ನಡೆಸಿದ್ದೇವೆ. ಆದರೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ" ಎಂದಿದ್ದಾರೆ.

ಮಾತುಕತೆ ನಡೆಸಲಾಗಿರುವ ಸಂಸ್ಥೆಗಳ ಹೆಸರುಗಳನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸುಧಾಕರ್ ತಿಳಿಸಿದ್ದರು, ಮೂಲಗಳ ಪ್ರಕಾರ ಬ್ರ್ಯಾಂಡ್ ಮೊನಾಚಿಸ್ ಮತ್ತು ಎಪಿಸಿಒ ಸಂಸ್ಥೆಗಳಿಗೆ ಅವಕಾಶ ಇದೆ ಎನ್ನಲಾಗಿದೆ. ನರೇಂದ್ರ ಮೋದಿ ಅವರ ಇಮೇಜ್ ವೃದ್ಧಿಗೆ ಎಪಿಸಿಒ ಕೆಲಸ ಮಾಡಿದ್ದರೆ, ಮಹಾರಾಷ್ಟ್ರದ ಇತ್ತೀಚಿನ ಚುನಾವಣೆಗಳಲ್ಲಿ ಶಿವಸೇನೆಯ ಜೊತೆಗೆ ಬ್ರ್ಯಾಂಡ್ ಮೊನಾಚಿಸ್ ಕೆಲಸ ಮಾಡಿತ್ತು.

ಬ್ರ್ಯಾಂಡ್ ಮೊನಾಚಿಸ್ ಪ್ರತಿನಿಧಿಗಳು ಕರ್ನಾಟಕ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿರುವುದನ್ನು ಧೃಢೀಕರಿಸಿದ್ದರೂ, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಎಪಿಸಿಒ ಹಿರಿಯ ಅಧಿಕಾರಿಗಳು ಇದರ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದು, ತಮ್ಮ ಗ್ರಾಹಕರ ಬಗೆಗೆ ಮಾತನಾಡುವುದಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement