ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಉನ್ನತ ಶಿಕ್ಷಣ ಇಲಾಖೆಗೆ 4,651 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ.
ವಿದ್ಯಾರ್ಥಿಗಳಿಗೆ ಭರಪೂರ ಕೊಡುಗೆ ನೀಡಿರುವ ಸಿಎಂ ಸಿದ್ದರಾಮಯ್ಯ, ಡಿಪ್ಲೋಮಾ ಮತ್ತು ಪಾಲಿಟೆಕ್ನಿಕ್ ಪರೀಕ್ಷೆ ಫಸ್ಟ್ ಕ್ಲಾಸ್ ಪಾಸಾದವರಿಗೆ 20 ಸಾವಿರ ಪ್ರೋತ್ಸಾಹಧನವನ್ನು ಘೋಷಿಸಿದ್ದಾರೆ. ಇನ್ನು .ಸಿಎ/ಸಿಡಬ್ಲೂಎ ಪರೀಕ್ಷೆ ಪಾಸಾದವರಿಗ 50 ಸಾವಿರದಿಂದ 1 ಲಕ್ಷ ರೂಪಾಯಿ ಪ್ರೋತ್ಸಾಹ ಧನವನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಘೋಷಿಸುವುದರೊಂದಿಗೆ ಎಲ್ಲಾ ಸಂಸ್ಥೆಗಳಲ್ಲಿ ಜ್ಞಾನ ಸಂಗಮ ಯೋಜನೆ ಜಾರಿಯಾಗಲಿದೆ. ಹಂಪಿ ವಿವಿಯಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆ. 5 ಸರ್ಕಾರಿ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣ. ಕರ್ನಾಟಕ ಚಿತ್ರಕಲಾ ಪರಿಷತ್ ಗೆ 1.5 ಕೋಟಿ ರೂಪಾಯಿ ಅನುದಾನ, ಶಿಕ್ಷಣ ಇಲಾಖೆಗೆ ಸಿಕ್ಕಿರುವ ಅನುದಾನವಾಗಿದೆ.
ಬೀದರ್‌ನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು. ಧಾರವಾಡದ ಕರ್ನಾಟಕ ವಿವಿಯಲ್ಲಿ ಎಂ.ಎಂ.ಕಲಬುರ್ಗಿ ಹೆಸರಿನಲ್ಲಿ ಸಂಶೋಧನಾ ಸಂಸ್ಥೆ ಮತ್ತು ಪ್ರಶಸ್ತಿ . ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಬೆಂಗಳೂರು ವಿವಿ, ತುಮಕೂರು ವಿವಿಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗೆ ಪ್ರೋತ್ಸಾಹ. ಕರ್ನಾಟಕ ಜಾನಪದ ವಿವಿ ಅಡಿಯಲ್ಲಿ ಪಾರಂಪರಿಕ ಕೇಂದ್ರ ಸ್ಥಾಪನೆಗೆ 2 ಕೋಟಿ. ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಪಡೆದವರಿಗೆ 50, 000 ಪ್ರೋತ್ಸಾಹಧನ, 5 ಸರ್ಕಾರಿ ಕಾಲೇಜುಗಳಿಗೆ 10 ಕೋಟಿ ಅನುದಾನ, ಶಿಕ್ಷಣ ಇಲಾಖೆಗೆ ಬಜೆಟ್ ನಲ್ಲಿ ದೊರೆತ ಪ್ರಮುಖ ಅಂಶಗಳಾಗಿವೆ.