ಪ್ರಧಾನ ಸುದ್ದಿ

ದೇಶದ್ರೋಹ ಕಾನೂನು ರದ್ದತಿಗೆ ಆಗ್ರಹಿಸಿ ಹೋರಾಟ ಮಾಡುವುದಾಗಿ ಕನ್ಹಯ್ಯ ಘೋಷಣೆ

Lingaraj Badiger
ನವದೆಹಲಿ: ದೇಶದ್ರೋಹದ ಕಾನೂನು ರದ್ದುಗೊಳಿಸುವಂತೆ ಆಗ್ರಹಿಸಿ ಹೋರಾಟ ಮಾಡುವುದಾಗಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ಶುಕ್ರವಾರ ಘೋಷಿಸಿದ್ದಾರೆ.
ಕನ್ಹಯ್ಯ ಕುಮಾರ್ ಹಾಗೂ ಇತರೆ ಇಬ್ಬರು ಪಿಎಚ್ ಡಿ ವಿದ್ಯಾರ್ಥಿಗಳನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿತ್ತು.
ಉಮರ್ ಖಾಲಿದ್ ಹಾಗೂ ಅನಿರ್ಬಾನ್ ಭಟ್ಟಾಚಾರ್ಯ ಅವರಿಗೆ ಜಾಮೀನು ನೀಡಿರುವುದನ್ನು ಸ್ವಾಗತಿಸಿರುವ ಕನ್ಹಯ್ಯ ಕುಮಾರ್, ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಎಲ್ಲಾ ಪಕ್ಷಗಳು ಹಾಗೂ ಜನರು ಬ್ರಿಟಿಷ್ ಯುಗದ ಕಾನೂನಿನ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡವಂತೆ ಮನವಿ ಮಾಡಿದ್ದಾರೆ.
ಪ್ರಜಾಪ್ರಭುತ್ವ ಬೆಂಬಲಿಸುವವರು ನಮ್ಮೊಂದಿಗೆ ಕೈಜೋಡಿಸಿ. ಅದೊಂದು ಸುದೀರ್ಘ ಹೋರಾಟಯ ನಮಗೆ ಈಗ ಜಾಮೀನು ಸಿಕ್ಕಿದ್ದು, ದೇಶದ್ರೋಹದ ಕಾನೂನು ರದ್ದುಗೊಳಿಸುವಂತೆ ಆಗ್ರಹಿಸಿ ಹೋರಾಟ ನಡೆಸೋಣ ಎಂದಿದ್ದಾರೆ.
ಅಫ್ಜಲ್ ಗುರು ಗಲ್ಲು ಶಿಕ್ಷೆ ವಿರುದ್ಧ ಪ್ರತಿಭಟನೆ ಆಯೋಜಿಸಿದ ಆರೋಪದ ಮೇಲೆ ಉಮರ್ ಖಾಲಿದ್ ಹಾಗೂ ಅನಿರ್ಬಾನ್ ಭಟ್ಟಾಚಾರ್ಯ ಅವರನ್ನು ಕಳೆದು ತಿಂಗಳು ಬಂಧಿಸಲಾಗಿತ್ತು. ಇಂದು ಅವರಿಗೆ ದೆಹಲಿ ಕೋರ್ಟ್ ಆರು ತಿಂಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
SCROLL FOR NEXT