ಅಂಗುಲ್: ರು.300 ಪಿಂಚಣಿ ಹಣ ಪಡೆಯಲು 65 ಹರೆಯದ ಅಂಗವಿಕಲೆ 2 ಕಿ.ಮೀ ಚಲಿಸಬೇಕಾಗುತ್ತದೆ. ನಿಲ್ಲುವ ಶಕ್ತಿಯಿಲ್ಲದ ಈ ವೃದ್ಧೆ ಮಗುವಿನಂತೆ ಅಂಬೆಗಾಲಿಡುತ್ತಾ 2 ಕಿ.ಮೀ ಕ್ರಮಿಸಿ ತನಗೆ ಬರಬೇಕಾದ ರು.300 ಪಿಂಚಣಿ ಹಣವನ್ನು ಪಡೆಯುತ್ತಾರೆ.
ಕಡಲಿಮುಂಡಾ ಹಳ್ಳಿಯ ಅಂಗವಿಕಲೆ ರುದನ ದೆಹುರಿ ಅವರಿಗೆ ಪಿಂಚಣಿ ಹಣ ಪಡೆಯುವುದೇ ದೊಡ್ಡ ಸಾಹಸವಾಗಿದೆ. ಪಿಂಚಣಿ ಹಣದಿಂದ ಬದುಕು ನಡೆಸುತ್ತಿರುವ ರುದನ, ಆ ಹಣವನ್ನು ಪಡೆಯಲು ಮಾತ್ರ ಅಷ್ಟೇ ಕಷ್ಟ ಪಡುತ್ತಿದ್ದಾರೆ. ತಮ್ಮ ಊರಿನಿಂದ ಸುಮಾರು 2 ಕಿಮೀ ದೂರದಲ್ಲಿರುವ ನಾನುಕಪಸಿ ಪಂಚಾಯತ್ ಕಛೇರಿಯಲ್ಲಿ ಪಿಂಚಣಿ ಹಣ ನೀಡಲಾಗುತ್ತದೆ. ಕೈ ಮತ್ತು ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ರುದನ ಪ್ರತಿ ತಿಂಗಳು 2 ಕಿ.ಮೀ ನಡೆದು ಹೋಗಿ ಹಣವನ್ನು ಪಡೆಯುತ್ತಾರೆ.
ತುಂಬಾ ದಿನಗಳ ಹಿಂದೆಯೇ ಈ ವೃದ್ಧೆಯನ್ನು ಮಕ್ಕಳು ಮತ್ತು ಪತಿ ತೊರೆದು ಹೋಗಿದ್ದಾರೆ. ಅಂದಿನಿಂದ ಏಕಾಂಗಿಯಾಗಿರುವ ರುದನ, ಬರುವ ರು.300 ಪಿಂಚಣಿಯಲ್ಲಿ ಬದುಕು ನಡೆಸುತ್ತಿದ್ದಾರೆ.
ತಮ್ಮ ಊರಿಗೆ ಬಂದು ಪಿಂಚಣಿ ಹಣ ನೀಡುವಂತೆ ರುದನ ಸಾಕಷ್ಟು ಬಾರಿ ಪಂಚಾಯತ್ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ, ಅದು ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಈ ಕುರಿತು ಪ್ರತಿಕ್ರಯಿಸಿದ ಸಬ್ ಕಲೆಕ್ಟರ್ ಅಮೂಲ್ಯ ಪಾಂಡ ಅವರು ಮನೆ ಬಾಗಿಲಿಗೆ ಪಿಂಚಣಿ ನೀಡುವ ಯಾವುದೇ ಅವಕಾಶ ಇಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics