ಪ್ರಧಾನ ಸುದ್ದಿ

ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಜಾಮೀನು

Guruprasad Narayana

ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದ ೨೫ ವಿದ್ಯಾರ್ಥಿಗಳು ಮತ್ತು ಇಬ್ಬರು ಉಪನ್ಯಾಸಕರಿಗೆ ಕೋರ್ಟ್ ಜಾಮೀನು ನೀಡಿದೆ. ಉಪಕುಲಪತಿ ಅಪ್ಪಾರಾವ್ ಅವರ ನಿವಾಸದ ಮೇಲಿನ ದಾಳಿಯ ಆರೋಪದ ಮೇಲೆ ಪೊಲೀಸರು ಇವರನ್ನು ಬಂಧಿಸಿದ್ದರು. ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಹಿನ್ನಲೆಯಲ್ಲಿ, ಎರಡು ತಿಂಗಳ ರಜೆಯ ನಂತರ ತಮ್ಮ ಸ್ಥಾನಕ್ಕೆ ಉಪಕುಲಪತಿ ಹಿಂದಿರುಗಿರುವುದನ್ನು ಇವರು ವಿರೋಧಿಸುತ್ತಿದ್ದರು.

ತೆಲಂಗಾಣ ಸರ್ಕಾರ ಜಾಮೀನು ನಿರಾಕರಿಸಲು ವಾದ ಮಾಡುವುದರಿಂದ ಹಿಂದುಳಿದಿದ್ದರಿಂದ ಮಿಯಾಪುರದ ೨೫ನೇ ಮೆಟ್ರೋಪಾಲಿಟನ್ ಮೆಜೆಸ್ಟ್ರೆಟ್ ನ್ಯಾಯಾಲಯ ಜಾಮೀನು ಆದೇಶ ನೀಡಿದೆ.

೫೦೦೦ ರೂ ಜಾಮೀನು ನೀಡಿ, ಈ ಪ್ರಕರಣ ಬಗೆಹರಿಯುವವರಿಗೆ ಗಾಚಿಬೌಲಿ ಪೊಲೀಸ್ ಠಾಣೆಗೆ ಪ್ರತಿವಾರ ಹಾಜರಾಗುವಂತೆ ನಿಯಮ ಹೇರಿ ಕೋರ್ಟ್ ಈ ಜಾಮೀನು ನೀಡಿದೆ.

ಇದಕ್ಕೂ ಮುಂಚಿತವಾಗಿ ಜಾಮೀನು ನಿರಾಕರಿಸುವಂತೆ ಪಬ್ಲಿಕ್ ಪ್ರಾಸೆಕ್ಯೂಟರ್ ಯಾವುದೇ ಅರ್ಜಿ ಸಲ್ಲಿಸದಿದ್ದರಿಂದ ಜಾಮೀನು ಆದೇಶ ಸುಗಮವಾಗಿದೆ.

ಸದ್ಯಕ್ಕೆ ಚೆರ್ಲಾಪಲ್ಲಿ ಜೈಲಿನಲ್ಲಿ ಬಂಧಿತರಾಗಿರುವ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು, ಸೋಮವಾರ ತಡರಾತ್ರಿ ಅಥವಾ ಮಂಗಳವಾರ ಬೆಳಗ್ಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

SCROLL FOR NEXT