ನಿತಿನ್ ಗಡ್ಕರಿ 
ಪ್ರಧಾನ ಸುದ್ದಿ

ಎಲ್ಲ ಸುಸ್ತಿದಾರರೂ ಕಳ್ಳರಲ್ಲ: ಗಡ್ಕರಿ

ಭಾರತೀಯ ತನಿಖಾ ದಳಗಳು, ಹಲವಾರು ಬ್ಯಾಂಕ್ ಗಳಿಗೆ ೯೦೦೦ಕೋಟಿ ರೂ ಸಾಲ ಹಿಂದಿರುಗಿಸಬೇಕಿರುವ ಸುಸ್ತಿದಾರ ವಿಜಯ್ ಮಲ್ಯ ಅವರನ್ನು ಹೊರದೇಶದಿಂದ ಗಡಿಪಾರು ಮಾಡಿ ಭಾರತಕ್ಕೆ ಕರೆತರಲು

ನವದೆಹಲಿ: ಭಾರತೀಯ ತನಿಖಾ ದಳಗಳು, ಹಲವಾರು ಬ್ಯಾಂಕ್ ಗಳಿಗೆ ೯೦೦೦ಕೋಟಿ ರೂ ಸಾಲ ಹಿಂದಿರುಗಿಸಬೇಕಿರುವ ಸುಸ್ತಿದಾರ ವಿಜಯ್ ಮಲ್ಯ ಅವರನ್ನು ಹೊರದೇಶದಿಂದ ಗಡಿಪಾರು ಮಾಡಿ ಭಾರತಕ್ಕೆ ಕರೆತರಲು ಪ್ರಯತ್ನಿಸುತ್ತಿರುವ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಸಂಪುಟದ ಪ್ರಮುಖ ಸದಸ್ಯ ನಿತಿನ್ ಗಡ್ಕರಿ "ಎಲ್ಲ ಸುಸ್ತಿದಾರರನ್ನು ಕಳ್ಳರೆನ್ನುವುದು ಸರಿಯಲ್ಲ" ಎಂದಿದ್ದಾರೆ.

"ವಿಜಯ್ ಮಲ್ಯ ಅವರ ವಿರುದ್ಧ ನ್ಯಾಯಂಗ ತನಿಖೆಗಳು ಜಾರಿಯಲ್ಲಿವೆ. ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಬಂದರು ಖಾತೆ ಸಚಿವ ನಿತಿನ್ ಗಡ್ಕರಿ ಇ ಟಿ ವಿ ನ್ಯೂಸ್ ನೆಟ್ವರ್ಕ್ ನ ವಾಹಿನಿಯೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.

"ಹಿಂದೆ ಅವರ ಸಂಸ್ಥೆಗಳು ಬ್ಯಾಂಕ್ ಗಳಿಗೆ ಸರಿಯಾಗಿ ಬಡ್ಡಿ ಕಟ್ಟುತ್ತಿದ್ದವು. ಅ ಸಮಯದಲ್ಲಿ ಜನ ಅವರನ್ನು ಒಳ್ಳೆಯವರು ಎನ್ನುತ್ತಿದ್ದರು. ಅವರ ಗುತ್ತಿಗೆದಾರರು, ವ್ಯವಸ್ಥಾಪಕರನ್ನು ಒಳ್ಳೆಯವರನ್ನಾಗಿ ನೋಡಲಾಗುತ್ತಿತ್ತು. ಈಗ ಸಂಸ್ಥೆ ಕಷ್ಟದ ಸಮಯ ಎದುರಿಸುತ್ತಿರುವಾಗ ಅವರನ್ನೆಲ್ಲಾ ಕಳ್ಳರೆನ್ನಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ.

"ಕಾನೂನಿಗೆ ತಕ್ಕಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ" ಎಂದು ಕೂಡ ಅವರು ತಿಳಿಸಿದ್ದಾರೆ.

ಜಾಗತಿಕವಾಗಿ ಆರ್ಥಿಕತೆ ಕುಂಠಿತವಾಗಿದೆ ಎಂದಿರುವ ಗಡ್ಕರಿ "ಎಲ್ಲವೂ ಸರಿಯಾದ ಸ್ಥಾನದಲ್ಲಿಲ್ಲ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಪರಿಸ್ಥಿಯನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದೇವೆ. ಬ್ಯಾಂಕ್ ಗಳ ಪರಿಸ್ಥಿತಿ ಕೂಡ ಉತ್ತಮವಾಗಿಲ್ಲ ಆದರೆ ಎಲ್ಲ ಸುಸ್ತಿದಾರರನ್ನು ಕಳ್ಳರು ಎನ್ನಲಾಗುವುದಿಲ್ಲ" ಎಂದು ಕೂಡ ಅವರು ಹೇಳಿದ್ದಾರೆ.

"ಮೋಸ ಮಾಡದ ಉದ್ದೇಶದಿಂದ ಸುಸ್ತಿದಾರರಾಗಿದ್ದಾರೆಯೇ ಅಥವಾ ಮೋಸ ಮಾಡುವ ಉದ್ದೇಶದಿಂದಲೇ ಎಂಬುದನ್ನು ಪ್ರತ್ಯೇಕಿಸುವುದು ಮುಖ್ಯ. ಮೋಸ ಮಾಡುವ ಯಾವುದೇ ಉದ್ದೇಶವಿಲ್ಲದ ಸುಸ್ತಿದಾರರಿಗೆ ನಾವು ಅಭಿವೃದ್ಧಿ ಮಾದರಿಯ ಧನಾತ್ಮಕ ಆಲೋಚನೆಯಿಂದ ಸಹಾಯ ಮಾಡಬೇಕು" ಎಂದು ಕೂಡ ಗಡ್ಕರಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT