ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ದೆಹಲಿಯಲ್ಲಿ ಡೀಸೆಲ್ ಟ್ಯಾಕ್ಸಿ ನಿಷೇಧ; ಪ್ರತಿಭಟನೆಯ ಬಿಸಿಗೆ ವಾಹನಸಂಚಾರ ಸ್ಥಗಿತ

ಡೀಸೆಲ್ ಟ್ಯಾಕ್ಸಿ ಚಾಲಕರ ಮುಷ್ಕರ ಎರಡನೆ ದಿನಕ್ಕೆ ಮುಂದುವರೆದಿದ್ದು ಮಂಗಳವಾರ ಕೂಡ ದೇಶದ ರಾಜಧಾನಿಯ ಪ್ರಮುಖ ಪ್ರದೇಶಗಳಲ್ಲಿ ವಾಹನ ಚಾಲನೆಯನ್ನು ಸ್ಥಗಿತಗೊಳಿಸಲು

ನವದೆಹಲಿ: ಡೀಸೆಲ್ ಟ್ಯಾಕ್ಸಿ ಚಾಲಕರ ಮುಷ್ಕರ ಎರಡನೆ ದಿನಕ್ಕೆ ಮುಂದುವರೆದಿದ್ದು ಮಂಗಳವಾರ ಕೂಡ ದೇಶದ ರಾಜಧಾನಿಯ ಪ್ರಮುಖ ಪ್ರದೇಶಗಳಲ್ಲಿ ವಾಹನ ಚಾಲನೆಯನ್ನು ಸ್ಥಗಿತಗೊಳಿಸಲು ಮುಷ್ಕರ ನಿರತ ಚಾಲಕರು ಸಫಲರಾಗಿದ್ದಾರೆ.

ಮೇ ೧ ರಿಂದ ನವದೆಹಲಿಯಲ್ಲಿ ಡಿಸೇಲ್ ಮತ್ತು ಪೆಟ್ರೋಲ್ ಟ್ಯಾಕ್ಸಿಗಳನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

ದೆಹಲಿ ವಾಹನ ಸಂಚಾರ ಪೊಲೀಸರ ಪ್ರಕಾರ ದೆಹಲಿ-ನೋಯ್ಡಾ ನೇರ ಮೇಲುಸೇತುವ, ದೌಲಾ ಖಾನ್, ಮಹಿಪಾಲ್ಪುರ್ ಮಾತು ಗುರಗಾಂವ್ ಕಡೆಗೆ ಹೋಗುವ ಇನ್ನಿತರ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ಪ್ರತಿಭಟನಾ ನಿರತ ಟ್ಯಾಕ್ಸಿ ಚಾಲಕರು ಸ್ಥಗಿತಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ತೊಂದರೆಯನ್ನು ನಿವಾರಿಸಲು ಹೆಚ್ಚುವರಿ ವಾಹನ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದ್ದರೂ ಪರಿಸ್ಥಿತಿ ಉತ್ತಮಗೊಂಡಿಲ್ಲ.

"ದೆಹಲಿ ಮತ್ತು ಎನ್ ಸಿ ಆರ್ ನ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನಕಾರರು ವಾಹನ ಸಂಚಾರಕ್ಕೆ ಅಡ್ಡಿ ಮಾಡಿ ಸ್ಥಗಿತಗೊಳಿಸಿದ್ದಾರೆ. ಈ ತೊಂದರೆ ನಿವಾರಿಸಲು ನಮ್ಮ ಅಧಿಕಾರಿಗಳನ್ನು ನಿಯೋಜಿಸಿದ್ದೇವೆ, ಇದಕ್ಕೆ ಇನ್ನೂ ಸಮಯ ಹಿಡುಯುತ್ತದೆ" ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!