ವಿವಾದದ ಕೇಂದ್ರವಾಗಿರುವ ಪುಸ್ತಕ "ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್" 
ಪ್ರಧಾನ ಸುದ್ದಿ

ಭಗತ್ ಸಿಂಗ್ ವಿವಾದ; ಸರ್ಕಾರಕ್ಕೆ ಇತಿಹಾಸ ಪುಸ್ತಕ ನಿಷೇಧಿಸಲು ನಾನು ತಿಳಿಸಿಲ್ಲ: ಪಿ ಜೆ ಕುರಿಯನ್

ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂದು ನಮೂದಿಸಲಾಗಿದ್ದ ಇತಿಹಾಸ ಪಠ್ಯಪುಸ್ತಕವನ್ನು ನಿಷೇಧಿಸಲು ನಾನೆಂದಿಗೂ ಸರ್ಕಾರಕ್ಕೆ ಹೇಳಿಲ್ಲ ಬದಲಾಗಿ 'ಭಯೋತ್ಪಾದಕ'

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂದು ನಮೂದಿಸಲಾಗಿದ್ದ ಇತಿಹಾಸ ಪಠ್ಯಪುಸ್ತಕವನ್ನು ನಿಷೇಧಿಸಲು ನಾನೆಂದಿಗೂ ಸರ್ಕಾರಕ್ಕೆ ಹೇಳಿಲ್ಲ ಬದಲಾಗಿ 'ಭಯೋತ್ಪಾದಕ' ಎಂದು ಬಳಸಿರುವ ಭಾಗಗಳನ್ನು ತೆಗೆದುಹಾಕಲಷ್ಟೇ ಹೇಳಿದ್ದು ಎಂದು ರಾಜ್ಯ ಸಭೆಯ ಉಪಕುಲಪತಿ ಪಿ ಜೆ ಕುರಿಯನ್ ಹೇಳಿದ್ದಾರೆ.

'ಭಯೋತ್ಪಾದಕ' ಎಂದು ಬಳಸಿರುವ ಭಾಗಗಳನ್ನು ತೆಗೆದುಹಾಕಲಷ್ಟೇ ಹೇಳಿರುವಾಗ ಸರ್ಕಾರ 'ಸ್ವಾತಂತ್ರ್ಯಕಾಗಿ ಭಾರತದ ಹೋರಾಟ' ಇತಿಹಾಸ ಪುಸ್ತಕವನ್ನೇ ನಿಷೇದಿಸಿದ್ದೇಕೆ ಎಂದು ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ಜೆ ಡಿ ಯು ಸದಸ್ಯ ಕೆ ಸಿ ತ್ಯಾಗಿ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕುರಿಯನ್ "ಪುಸ್ತಕವನ್ನು ನಿಷೇಧಿಸಲು ಸಾಧ್ಯವಿಲ್ಲ, ಆ ಪದವನ್ನಷ್ಟೇ ಪುಸ್ತಕದಿಂದ ಕೈಬಿಡಬೇಕು" ಎಂದಿದ್ದಾರೆ.

ಸರ್ಕಾರದ ಪರವಾಗಿ ಇದಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಹಾಗು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಇದಕ್ಕೆ ಎರಡು ಆಯ್ಕೆಗಳಿವೆ ಒಂದು ಪುಸ್ತಕದಿಂದ ಆ ಪುಟಗಳನ್ನು ಹರಿದು ಹಾಕುವುದು ಮತ್ತೊಂದು ಪಠ್ಯಪುಸ್ತಕವನ್ನು ನಿಷೇಧಿಸುವುದು ಎಂದಿದ್ದಾರೆ.

"ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂದವರನ್ನು ನಾವು ರಕ್ಷಿಸುವುದಿಲ್ಲ" ಎಂದು ಕೂಡ ಅವರು ಹೇಳಿದ್ದಾರೆ.

ಇದನ್ನು ಬರೆದ ಲೇಖಕನಿಗೆ ಶಿಕ್ಷೆ ನಿಡಬೇಕೆಂದು ಸಮಾಜವಾದಿ ಪಕ್ಷದ ನರೇಶ್ ಅಗರವಾಲ್ ಆಗ್ರಹಿಸಿದ್ದಾರೆ. ಈ ಪಠ್ಯಪುಸ್ತಕದ ಒಬ್ಬ ಲೇಖಕ ಬಿಪಿನ್ ಚಂದ್ರ ಸಿ ಪಿ ಐ ಪಕ್ಷದವರಾಗಿದ್ದರು ಎಂದು ಬಿಜೆಪಿ ಸದಸ್ಯ ಸುಬ್ರಮಣ್ಯ ಸ್ವಾಮಿ ನೀಡಿದ ಹೇಳಿಕೆಗೆ ಸಿ ಪಿ ಐ ಮುಖಂಡ ಡಿ ರಾಜ ವಿರೋಧಿಸಿದ್ದಾರೆ.

೧೯೮೮ರಲ್ಲಿ ಪ್ರಕಟವಾಗಿದ್ದ "ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್" (ಸ್ವಾತಂತ್ರ್ಯಕಾಗಿ ಭಾರತದ ಹೋರಾಟ) ಪುಸ್ತಕವನ್ನು ಬಿಪಿನ್ ಚಂದ್ರ, ಮೃದುಲಾ ಮುಖರ್ಜಿ, ಆದಿತ್ಯ ಮುಖರ್ಜಿ, ಕೆ ಎನ್ ಪಣಿಕ್ಕರ್ ಮತ್ತು ಸುಚೇತಾ ಮಹಾಜನ್ ಜಂಟಿಯಾಗಿ ಬರೆದಿದ್ದರು.

ಕಳೆದ ೨೫ ವರ್ಷಗಳಿಂದಲೂ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಇದು ಪಠ್ಯದ ಭಾಗವಾಗಿದ್ದು, ಭಾರತೀಯ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅತ್ಯುತ್ತಮ ಇತಿಹಾಸ ಪುಸ್ತಕಗಳಲ್ಲಿ ಇದು ಒಂದು ಎಂದು ಪರಿಗಣಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್