ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು ಗುರುವಾರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಉಚಿತವಾಗಿ ಮೊಬೈಲ್, ಸೆಟ್ -ಟಾಪ್ ಬಾಕ್ಸ್ ಹಾಗೂ ಲ್ಯಾಪ್ ಟಾಪ್ ನೀಡುವುದು ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದಾರೆ.
ಇಂದು ಎರೋಡ್ ಜಿಲ್ಲೆಯ ಪೆರುಂದುರೈನಲ್ಲಿ ನಡೆದಿ ಬಹಿರಂಗ ಸಮಾವೇಶದಲ್ಲಿ ಜಯಲಲಿತಾ ಅವರು ಎಐಎಡಿಎಂಕೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಲೋಕಸಭಾ ಉಪ ಸಭಾಪತಿ ಎಂ.ತಂಬಿದುರೈ, ಓರ್ವ ರೈತ, ಓರ್ವ ಮಹಿಳೆ ಹಾಗೂ ಯುವತಿಯೊಬ್ಬರಿಗೆ ಮೊದಲ ಪ್ರತಿ ನೀಡಲಾಯಿತು.
ಈ ವೇಳೆ ಮಾತನಾಡಿದ ತಮಿಳುನಾಡು ಸಿಎಂ, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಮಾತ್ರವಲ್ಲದೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಉತ್ತಮ ಕೆಲಸಗಳನ್ನು ಮಾಡುವುದಾಗಿ ಭರವಸೆ ನೀಡಿದರು.
ರಾಜ್ಯದಲ್ಲಿ ಲೋಕಾಯುಕ್ತ ಸ್ಥಾಪನೆ, ರೈತರ ಸಾಲ ಮನ್ನಾ, ಅಮ್ಮ ಮಿನರಲ್ ವಾಟರ್ ಯೋಜನೆ ಹಾಗೂ ಮೆಟ್ರೊ ರೈಲ್ ನ್ನು ಮತ್ತಷ್ಟು ವಿಸ್ತರಿಸುವುದಾಗಿ ಎಐಎಡಿಎಂಕೆ ಭರವಸೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics