'ಸ್ನೇಕ್ ಗ್ಯಾಂಗ್'ನ ಕೆಲವು ಸದಸ್ಯರು 
ಪ್ರಧಾನ ಸುದ್ದಿ

ಹೈದರಾಬಾದ್ 'ಸ್ನೇಕ್ ಗ್ಯಾಂಗ್'ನ ಎಂಟು ಸದಸ್ಯರು ತಪ್ಪಿತಸ್ಥರೆಂದ ಕೋರ್ಟ್

ಹಾವುಗಳನ್ನು ಬಳಸಿ ಸಂತ್ರಸ್ತರನ್ನು ಹೆದರಿಸಿ ಹಲವಾರು ಅಪರಾಧಗಳನ್ನು ಎಸಗಿದ್ದ 'ಸ್ನೇಕ್ ಗ್ಯಾಂಗ್' ನ ಎಂಟು ಸದಸ್ಯರು ತಪ್ಪಿತಸ್ಥರು ಎಂದು ನಗರ ನ್ಯಾಯಾಲಯ ಮಂಗಳವಾರ ತೀರ್ಪು

ಹೈದರಾಬಾದ್: ಹಾವುಗಳನ್ನು ಬಳಸಿ ಸಂತ್ರಸ್ತರನ್ನು ಹೆದರಿಸಿ ಹಲವಾರು ಅಪರಾಧಗಳನ್ನು ಎಸಗಿದ್ದ 'ಸ್ನೇಕ್ ಗ್ಯಾಂಗ್' ನ ಎಂಟು ಸದಸ್ಯರು ತಪ್ಪಿತಸ್ಥರು ಎಂದು ನಗರ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

ಒಂಭತ್ತನೇ ಆರೋಪಿಯನ್ನು ಕೋರ್ಟ್ ಖುಲಾಸೆ ಮಾಡಿದೆ.

ಪ್ರಮುಖ ಆರೋಪಿ ಜಿಮ್ ತರಬೇತುದಾರ ಫೈಸಲ್ ದಯಾನಿ ಮತ್ತು ಇತರರನ್ನು ದರೋಡೆ ಪ್ರಕರಣಗಳಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಲಾಗಿದೆ. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ರಂಗಾ ರೆಡ್ಡಿ ಬುಧವಾರ ಶಿಕ್ಷೆಯ ಪ್ರಮಾಣವನ್ನು ಘೋಷಿಸಲಿದ್ದಾರೆ.

ಪ್ರಾಸೆಕ್ಯೂಟರ್ ಹೇಳಿದಂತೆ ಭಾರತೀಯ ಅಪರಾಧ ನೀತಿ ಸಂಹಿತೆ ಸೆಕ್ಷನ್ ೩೯೫ರ ಪ್ರಕಾರ ತಪ್ಪಿತಸ್ಥರಿಗೆ ೧೦ ವರ್ಷಗಳ ಕಠಿಣ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಸಂತ್ರಸ್ತೆ ತನ್ನ ಹೇಳಿಕೆಯನ್ನು ಹಿಂಪಡೆದಿದ್ದಕ್ಕೆ ಆರೋಪಿಗಳ ವಿರುದ್ಧ ಗ್ಯಾಂಗ್ ರೇಪ್ ಆರೋಪವನ್ನು ಕೈಬಿಡಲಾಗಿದೆ. ತನ್ನ ಭಾವಿ ಪತಿಯ ಎದುರೇ ಈ ಗುಂಪು ತನ್ನನ್ನು ಗ್ಯಾಂಗ್ ರೇಪ್ ಮಾಡಿತ್ತು ಎಂದು ೨೦೧೪ ರಲ್ಲಿ ಯುವತಿ ಪೊಲೀಸರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಈ ಗ್ಯಾಂಗ್ ನ ಇತರ ಅಪಾರಧಿ ಚಟುವಟಿಕೆಗಳು ಬೆಳಕಿದೆ ಬಂದಿದ್ದವು.

ಪಹಾಡಿ ಶರೀಫಾ ಪ್ರದೇಶದ ಅತಿಥಿ ಗೃಹವೊಂದರೊಳಗೆ ಹೊಕ್ಕಿದ್ದ ಈ ಗ್ಯಾಂಗ್ ಈ ಜೋಡಿಯಿಂದ ೬೦ ಸಾವಿರ ರೂ ದೋಚಿತ್ತು. ನಿರ್ಭಯ ಆಕ್ಟ್ ೩೫೪ ಬಿ ಅಡಿ ಈ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಹಣ ವಸೂಲಿ ಮತ್ತು ವಿವಾದಗಳನ್ನು ಬಗೆಹರಿಸುವ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಈ ಗ್ಯಾಂಗ್ ಸಂತ್ರಸ್ತರನ್ನು ಬೆದರಿಸಲು ಹಾವುಗಳನ್ನು ಉಪಯೋಗಿಸುತ್ತಿತ್ತು. ಇವರಿಂದ ೪ ಕುದುರೆಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದ್ದು, ಪ್ರಾಣಿಗಳ ಮೇಲೆ ಹಿಂಸೆಯ ಪ್ರಕರಣವನ್ನು ಕೂಡ ದಾಖಲಿಸಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! Video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

SCROLL FOR NEXT