ಪ್ರಧಾನ ಸುದ್ದಿ

ಉತ್ತರ ಪ್ರದೇಶ ಚುನಾವಣಾ ತಂತ್ರ: ಬಿ ಎಸ್ ಪಿ ಶಾಸಕರಿಗೆ ದೆಹಲಿಗೆ ಬುಲಾವ್

Guruprasad Narayana

ಲಕನೌ: ೨೦೧೭ ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಿಗೆ ಪಕ್ಷದ ತಂತ್ರಗಾರಿಕೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲು ಬಹುಜನ ಸಮಾಜ ಪಕ್ಷದ ಎಲ್ಲ ಶಾಸಕರಿಗೆ ಪಕ್ಷದ ಅಧ್ಯಕ್ಷೆ ಮಾಯಾವತಿ ದೆಹಲಿಗೆ ಬುಲಾವ್ ನೀಡಿದ್ದಾರೆ.

ಚರ್ಚೆಗಳಿಗೆ ಪಕ್ಷದ ಕಚೇರಿಯ ಹಿರಿಯ ಅಧಿಕಾರಿಗಳನ್ನು ಕೂಡ ಹಾಜರಿರಲು ಪಕ್ಷದ ಅಧ್ಯಕ್ಷೆ ಸೂಚಿಸಿದ್ದಾರೆ.

ಮುಂಬರಲಿರುವ ರಾಜ್ಯಸಭಾ ಚುನಾವಣೆ ಮತ್ತು ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ತಂತ್ರಗಾರಿಕೆ ಈ ಚರ್ಚೆಯ ಮುಖ್ಯ ಉದ್ದೇಶವಾಗಿದೆ.

ಉತ್ತರ ಪ್ರದೇಶದಲ್ಲಿನ ಬಿ ಎಸ್ ಪಿ ಶಾಸಕರ ಸಂಖ್ಯೆಯ ಆಧಾರದ ಮೇಲೆ ಇಬ್ಬರು ಸದಸ್ಯರನ್ನು ರಾಜ್ಯಸಭೆಗೆ ಕಳುಹಿಸಬಹುದಾಗಿದೆ. ಅದರಲ್ಲಿ ಸದ್ಯದ ಸಂಸದ ಸತೀಶ್ ಮಿಶ್ರಾ ಅವರನ್ನು ಮತ್ತೆ ಮರುನೇಮಕ ಮಾಡಲಿದೆ ಎಂದು ತಿಳಿದುಬಂದಿದೆ. ಮತ್ತೊಬ್ಬ ಅಭ್ಯರ್ಥಿ ದಲಿತ ಸಮುದಾಯದವರಾಗಿರುತ್ತಾರೆ ಎಂದು ಪಕ್ಷದ ಅಧ್ಯಕ್ಷೆ ತಿಳಿಸಿದ್ದಾರೆ.

ಅಲ್ಲದೆ ಉತ್ತರ ಪ್ರದೇಶದ ವಿಧಾನ ಪರಿಷತ್ತಿಗೂ ಮೂವರು ಸದಸ್ಯರನ್ನು ಬಿ ಎಸ್ ಪಿ ನೇಮಿಸಬೇಕಿದೆ.

SCROLL FOR NEXT