ಪ್ರಧಾನ ಸುದ್ದಿ

ಮೇ 25ರಂದು ಪಿಣರಾಯಿ ವಿಜಯನ್ ಪ್ರಮಾಣ

Guruprasad Narayana

ತಿರುವನಂತಪುರಮ್: ಮೇ ೨೫ ರಂದು ಕೇರಳದ ರಾಜಧಾನಿಯಲ್ಲಿ ಪಿಣರಾಯಿ ವಿಜಯನ್ ಅವರು ರಾಜ್ಯದ ೨೨ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಿಪಿಐ-ಎಂ ಮುಂದಾಳತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ ಡಿ ಎಫ್) ಕೇರಳ ವಿಧಾನಸಭೆಯ ೧೪೦ ಸಂಖ್ಯೆಯ ಬಲಾಬಲದಲ್ಲಿ ೯೧ ಸ್ಥಾನಗಳನ್ನು ಗುರುವಾರ ಗೆದ್ದಿತ್ತು.

ತಮ್ಮ ಸಹದ್ಯೋಗಿ ವಿ ಎಸ್ ಅಚ್ಯುತಾನಂದ್ ಮತ್ತು ಸಿಪಿಐ-ಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣ ಅವರನ್ನು ವಿಜಯನ್ ಭೇಟಿ ಮಾಡಿದ ಮೇಲೆ ಪ್ರಮಾಣವಚನ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

"ಅವರು (ಅಚ್ಯುತಾನಂದ್) ಅವರು ನಮ್ಮ ಪಕ್ಷದಿಂದ ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು. ಆದುದರಿಂದ ನಮ್ಮನ್ನು ಭೇಟಿ ಮಾಡಿದರು. ಸದ್ಯಕ್ಕೆ ನಿಗದಿಯಾಗಿರುವಂತೆ ಸೆಂಟ್ರಲ್ ಸ್ಟೇಡಿಯಂ ನಲ್ಲಿ ಬುಧವಾರ (ಮೇ ೨೫) ಹೊಸ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ" ಎಂದು ವಿಜಯನ್ ಹೇಳಿದ್ದಾರೆ.

"ಸಂಪುಟ ರಚನೆಯ ಬಗ್ಗೆ ಚರ್ಚೆಗಳು ಜಾರಿಯಲ್ಲಿವೆ ಮತ್ತು ಮುಂದಿನ ದಿನಗಳಲ್ಲಿ ಈ ಪಟ್ಟಿ ಸಿದ್ಧವಾಗಲಿದೆ" ಎಂದು ಕೂಡ ಅವರು ಹೇಳಿದ್ದಾರೆ.

ಶುಕ್ರವಾರ ನಡೆದ ಪಕ್ಷದ ಸಭೆಯಲ್ಲಿ ವಿಜಯನ್ ಅವರನ್ನು ಮುಖಂಡರನ್ನಾಗಿ ಆಯ್ಕೆ ಮಾಡಲಾಗಿತ್ತು.

SCROLL FOR NEXT