ನರೇಂದ್ರ ಮೋದಿ 
ಪ್ರಧಾನ ಸುದ್ದಿ

ಪಾಕ್ ಉಗ್ರರಿಗೆ ಬೆಂಬಲ ನೀಡುವುದನ್ನು ಸಂಪೂರ್ಣ ನಿಲ್ಲಿಸಲಿ: ಪ್ರಧಾನಿ ಮೋದಿ

ಪಾಕಿಸ್ತಾನ ಒಂದು ವೇಳೆ ಉಗ್ರರಿಗೆ ನೀಡುತ್ತಿರುವ ಸರ್ಕಾರಿ ಪ್ರಾಯೋಜಿತ ಅಥವಾ ಇತರೆ ಯಾವುದೇ ಬೆಂಬಲಗಳನ್ನು ಸಂಪೂರ್ಣ ನಿಲ್ಲಿಸಿದರೆ...

ವಾಷಿಗ್ಟನ್: ಪಾಕಿಸ್ತಾನ ಒಂದು ವೇಳೆ ಉಗ್ರರಿಗೆ ನೀಡುತ್ತಿರುವ ಸರ್ಕಾರಿ ಪ್ರಾಯೋಜಿತ ಅಥವಾ ಇತರೆ ಯಾವುದೇ ಬೆಂಬಲಗಳನ್ನು ಸಂಪೂರ್ಣ ನಿಲ್ಲಿಸಿದರೆ ನಿಜಕ್ಕೂ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧ ಉನ್ನತ ಮಟ್ಟಕ್ಕೆ ಹೋಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
ಉಗ್ರರಿಗೆ ನೀಡುತ್ತಿರುವ ಯಾವುದೇ ರೀತಿಯ ನೆರವು ನೀಡುವುದನ್ನು ನಿಲ್ಲಿಸಿ ಎಂದು ತಾವು ಪಾಕಿಸ್ತಾನಕ್ಕೆ ಕೇಳಿಕೊಂಡಿರುವುದಾಗಿ ಪ್ರಧಾನಿ ಮೋದಿ ಅವರು ವಾಲ್ ಸ್ಟ್ರೀಟ್ ಜರ್ನಲ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
'ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿಗಾಗಿ ನಾವು ಮೊದಲ ಹೆಜ್ಜೆಯಿಡಲು ಸಿದ್ಧರಿದ್ದೇವೆ. ಆದರೆ ಅದು ಒಂದು ಕಡೆಯಿಂದ ಸಾಧ್ಯವಿಲ್ಲ. ಎರಡು ಕಡೆಯಿಂದಲೂ ಆ ಪ್ರಯತ್ನ ನಡೆಯಬೇಕು ಎಂಬುದು ನನ್ನ ಅಭಿಪ್ರಾಯ' ಎಂದು ಪ್ರಧಾನಿ ಹೇಳಿದ್ದಾರೆ.
ಭಾರತ-ಪಾಕಿಸ್ತಾನ ಪರಸ್ಪರ ಕಿತ್ತಾಡುವುದರ ಬದಲು ಇಬ್ಬರೂ ಒಗ್ಗಟ್ಟಾಗಿ ಬಡತನದ ವಿರುದ್ಧ ಹೋರಾಡಬೇಕು. ಆದರೆ ಉಗ್ರರ ವಿಚಾರದಲ್ಲಿ ನಾವು ರಾಜಿಯಾಗುವುದಿಲ್ಲ ಎಂದಿರುವ ಪ್ರಧಾನಿ, ಭಯೋತ್ಪಾದನೆಗೆ ಯಾವುದೇ ರೀತಿಯ ನೆರವು ನೀಡುವುದನ್ನು ಪಾಕಿಸ್ತಾನ ಮೊದಲು ನಿಲ್ಲಿಸಲಿ ಎಂದು ಹೇಳಿದ್ದಾರೆ.
ನಾನು ಪ್ರಧಾನಿಯಾದ ಮೊದಲ ದಿನದಿಂದಲೇ ನೆರೆಹೊರೆಯ ದೇಶಗಳ ಜೊತೆ ಸೌಹಾರ್ದ ಸಂಬಂಧ ಇರಿಸಿಕೊಳ್ಳುವುದಕ್ಕೆ ಒತ್ತು ನೀಡಿದೆ. ಭಾರತದ ಭವಿಷ್ಯದ ಬಗ್ಗೆ ಕನಸು ಕಾಣುವಾಗ ನಾನು ನೆರೆರಾಷ್ಟ್ರಗಳ ಭವಿಷ್ಯದ ಬಗ್ಗೆಯೂ ಕನಸು ಕಾಣುತ್ತೇನೆ. ಭಾರತ-ಪಾಕಿಸ್ಥಾನ ಪರಸ್ಪರ ಕಿತ್ತಾಡಿಕೊಳ್ಳುವ ಬದಲು ಎರಡೂ ದೇಶಗಳು ಸೇರಿ ಬಡತನದ ವಿರುದ್ಧ ಹೋರಾಡಬೇಕು ಎಂಬುದು ನನ್ನ ಬಯಕೆ ಎಂದಿದ್ದಾರೆ.
ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪಾಕ್‌ ವಿಫ‌ಲವಾದರೆ ಅದು ನಮ್ಮ ಸಂಬಂಧದ ಮೇಲೂ ಪರಿಣಾಮ ಬೀರುತ್ತದೆ. ಏಕೆಂದರೆ ಶಾಂತಿಯ ಹಾದಿಯೆಂಬುದು ಏಕಮುಖವಲ್ಲ, ದ್ವಿಮುಖ ಎಂದು ಪ್ರಧಾನಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್