ನನ್ನ ಮಗ ಅಭಿಷೇಕ್ ಗೌಡ ರಾಜಕೀಯಕ್ಕೆ ಬರುವುದು ಬೇಡ: ಅಂಬರೀಶ್
ವಸತಿ ಸಚಿವ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರು ಭಾನುವಾರ ತಮ್ಮ 64ನೇ ಹುಟ್ಟು ಹಬ್ಬ ಆಚರಿಸಿಕೊಂಡರು.
ಬೆಂಗಳೂರು: ವಸತಿ ಸಚಿವ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರು ಭಾನುವಾರ ತಮ್ಮ 64ನೇ ಹುಟ್ಟು ಹಬ್ಬ ಆಚರಿಸಿಕೊಂಡರು.
ಅಂಬರೀಶ್ ಅವರ ನೂರಾರು ಅಭಿಮಾನಿಗಳು ಇಂದು ಜೆಪಿ ನಗರದ ಅವರ ಮನೆಗೆ ಆಗಮಿಸಿ ಶುಭಕೋರಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬರೀಶ್, ನಾನು ಜನರ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ ಎಂದರು.
ನನ್ನ ಮನೆಯಲ್ಲಿ ನಾನು ಬಿಟ್ಟು ಬೇರೆ ಯಾರೂ ರಾಜಕೀಯಕ್ಕೆ ಬರುವುದಿಲ್ಲ. ನನ್ನ ಮಗ ಅಭಿಷೇಕ್ ಗೌಡ ಸಹ ರಾಜಕೀಯಕ್ಕೆ ಬರುವುದು ಬೇಡ. ಅವನ ದಾರಿ ಅವನು ನೋಡಿಕೊಳ್ಳುತ್ತಾನೆ ಎಂದರು.
ಇದೇ ವೇಳೆ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಬೆಂಗಳೂರಿನಲ್ಲೇ ನಿರ್ಮಾಣ ಮಾಡುವ ಗುರಿ ನಮ್ಮದು .ಈ ಕುರಿತಾಗಿ ಹಿರಿಯರು ಸೇರಿ ಚರ್ಚೆ ನಡೆಸಿದ್ದೇವೆ. ದಿವಂಗತ ಬಾಲಣ್ಣ ಅವರು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ,ಅವರ ಕುಟುಂಬಕ್ಕೆ ತೊಂದರೆ ಕೊಡುವ ಇರಾದೆ ನಮಗಿಲ್ಲ.ಮುಂದೆ ಏನಾಗುತ್ತದೆ ಕಾದು ನೋಡುವ ಎಂದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.