ಬಾಬುರಾವ್ ಚಿಂಚನಸೂರ್ 
ಪ್ರಧಾನ ಸುದ್ದಿ

ತನಿಖಾಧಿಕಾರಿ ಜತೆ ಡೀಲ್?: ಸಚಿವ ಚಿಂಚನಸೂರ್, ಸಿಸಿಬಿ ಇನ್ಸ್ ಪೆಕ್ಟರ್ ವಿರುದ್ಧ ದೂರು

ಚೆಕ್ ಬೌನ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಮೇಲೆ ಪ್ರಭಾವ ಬೀರಿದ ಆರೋಪದ ಮೇಲೆ ಜವಳಿ ಸಚಿವ ಬಾಬೂರಾವ್ ಚಿಂಚನಸೂರ್...

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಮೇಲೆ ಪ್ರಭಾವ ಬೀರಿದ ಆರೋಪದ ಮೇಲೆ ಜವಳಿ ಸಚಿವ ಬಾಬೂರಾವ್ ಚಿಂಚನಸೂರ್  ಅವರು ವಿರುದ್ಧ ಮಹಿಳಾ ಆಯೋಗ ಹಾಗೂ ಪೊಲೀಸರಿಗೆ ದೂರು ನೀಡಲಾಗಿದೆ.
ಅಂಜನಾ ಶಾಂತವೀರ ಎಂಬುವವರು ಕೆಲವು ತಿಂಗಳ ಹಿಂದೆ ಸಚಿವ ಚಿಂಚನಸೂರ್ ವಿರುದ್ಧ ಚೆಕ್ ಬೌನ್ಸ್ ಪ್ರಕರಣದ ದಾಖಲಿಸಿದ್ದರು. ಈ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಇನ್ಸ್ ಪೆಕ್ಟರ್ ಅನಂದ್ ಕಬೂರ್ ಅವರು ತನಿಖೆ ಮುಗಿಯುವ ಮುನ್ನವೇ ಸಚಿವರಿಗೆ ಮಾಹಿತಿ ನೀಡಿದ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ಅಂಜನಾ ಅವರು ಸಚಿವರ ಹಾಗೂ ತನಿಖಾಧಿಕಾರಿ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಅನಂದ್ ಕಬೂರ್ ಅವರು ತಮ್ಮ ತಮ್ಮನಿಗೆ ಸರ್ಕಾರಿ ವೈದ್ಯನ ಪೋಸ್ಟ್ ಗಿಟ್ಟಿಸಲು ಡೀಲ್‍ಗೆ ಇಳಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಈ ಸಂಬಂಧ ಸಚಿವರು ಹಾಗೂ ತನಿಖಾಧಿಕಾರಿ ನಡೆಸಿರುವ ಡೀಲ್ ಸಂಭಾಷಣೆಯನ್ನು ದೂರುದಾರೆ ಅಂಜನಾ ಅವರು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾರೆ. ಆಡಿಯೋದಲ್ಲಿ ತನಿಖಾಧಿಕಾರಿ ದೂರುದಾರ ಮಹಿಳೆಯನ್ನೆ ಕೆಟ್ಟ ಹೆಂಗಸು ಅಂತ ಬೈದಿದ್ದಾರೆ.
ಏನಿದು ಪ್ರಕರಣ?
ಸಚಿವ ಬಾಬುರಾವ್ ಚಿಂಚನಸೂರ್ ಹಾಗೂ ಅಂಜನಾ ಶಾಂತವೀರ ಅವರಿಗೆ ಹಲವು ವರ್ಷಗಳ ಪರಿಚಯವಿದ್ದು, ಇವರಿಬ್ಬರ ಮಧ್ಯೆ ಸಾಕಷ್ಟು ಬಾರಿ ಕೋಟಿಗಟ್ಟಲೇ ಹಣಕಾಸು ವ್ಯವಹಾರ ನಡೆದಿತ್ತು. 2011ರ ಜನವರಿ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ 11.88 ಕೋಟಿ ರೂಪಾಯಿ ಸಾಲವನ್ನು ಅಂಜನಾ ಬಾನುರಾವ್ ಚಿಂಚನಸೂರ್‍ಗೆ ನೀಡಿದ್ದರು. ಬಳಿಕ ಅಂಜನಾ ಅವರು ತಮ್ಮ ಮೂರು ಕಾರ್ಖಾನೆಗಳ ನವೀಕರಣಕ್ಕೆ ನೀಡಿರುವ ಸಾಲವನ್ನು ಮರು ಪಾವತಿಸಲು ಕೇಳಿಕೊಂಡಿದ್ದರು. ಈ ವೇಳೆ ಮರು ಪಾವತಿಗೆ ಚಿಂಚನಸೂರ್ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಅಂಜನಾ ಅವರು 2015ರ ಜುಲೈ ತಿಂಗಳಿನಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್‍ನಲ್ಲಿ ದೂರು ದಾಖಲಿಸಿದ್ದರು. ನಂತರ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT