ಜೆ ಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆ
ನವದೆಹಲಿ: ಪಿಸ್ತೂಲುಗಳು ಮತ್ತು ತೋಟಾಗಳಿದ್ದ ಕಪ್ಪು ಬಣ್ಣದ ಬ್ಯಾಗ್ ಅನ್ನು ದೆಹಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಎಬಿವಿಪಿ ಜೊತೆಗೆ ಕಾದಾಟದ ನಂತರ ಜೆ ಎನ್ ಯು ನ ಎಂ ಎಸ್ ಸಿ ವಿದ್ಯಾರ್ಥಿ ನಜೀಬ್ ಅಹ್ಮದ್ 22 ದಿನಗಳಿಂದ ಕಾಣೆಯಾಗಿದ್ದು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ಬ್ಯಾಗ್ ಅನ್ನು ಮಧ್ಯರಾತ್ರಿ 2 ಘಂಟೆಗೆ ಕಾವಲು ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ.
ಈ ಬ್ಯಾಗ್ ನಲಿ 7.65 ಪಿಸ್ತೂಲು, ಏಳು ತೋಟಾಗಳು ಮತ್ತು ಸ್ಕ್ರ್ಯು ಡ್ರೈವರ್ ಇದ್ದವೆಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಕಾವಲು ಸಿಬ್ಬಂದಿ ಜೆ ಎನ್ ಯು ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ, ಪೊಲೀಸರು ಸ್ಥಳಕ್ಕೆ ಧಾವಿಸಿ ಬ್ಯಾಗ್ ವಶಕ್ಕೆ ಪಡೆದು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೆನ್ನೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನಜೀಬ್ ಅವರ ತಾಯಿಯವರನ್ನು ಒಳಗೊಂಡಂತೆ 200 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಉತ್ತರ ಪ್ರದೇಶದ ಮೂಲದ ಬಯೊಟೆಕ್ನಾಲಜಿ ವಿದ್ಯಾರ್ಥಿ ನಜೀಬ್ ಅಕ್ಟೋಬರ್ 15 ರಿಂದ ಕಾಣೆಯಾಗಿದ್ದಾರೆ.