ನವದೆಹಲಿ: ಭದ್ರತಾ ಕಾರಣಗಳಿಗಾಗಿ ಮತ್ತು ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದಿಟ್ಟುಕೊಂಡು, ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಖಾ, ಹೆಲ್ಮೆಟ್ ಮತ್ತು ಮುಖ ಕವಚ ಧರಿಸುವುದನ್ನು ನಿಷೇಧಿಸುವಂತೆ ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾ ಮಾಡಿದೆ.
ಮುಖ್ಯ ನ್ಯಾಯಾಧೀಶೆ ಜಿ ರೋಹಿಣಿ ಮತ್ತು ನ್ಯಾಯಾಧೀಶೆ ಸಂಗೀತ ಧಿಂಗ್ರಾ ಸೆಹಗಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ದೆಹಲಿ ನಿವಾಸಿ ಸರ್ದಾರ್ ರವಿ ರಂಜನ್ ಸಿಂಗ್ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯವನ್ನು ವಜಾ ಮಾಡಿದ್ದು ಇದು ಸಾರ್ವಜನಿಕ ಹಿತಾಸಕ್ತಿಗೆ ಒಳಪಟ್ಟಿದ್ದಲ್ಲ ಎಂದಿದೆ.
ಮುಖ ಕವಚ ಮತ್ತು ಸಂಪೂರ್ಣ ದೇಹವನ್ನು ಹೊದೆಯುವ ಬುರ್ಖಾ ಭದ್ರತಾ ಭೀತಿಯನ್ನು ಸೃಷ್ಟಿಸಿದೆ ಮತ್ತು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.