ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 
ಪ್ರಧಾನ ಸುದ್ದಿ

ನೋಟು ಹಿಂಪಡೆತ; ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ನೀಡಿದ ಮಮತಾ

೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರದಿಂದ ಜನರು ಎದುರಿಸುತ್ತಿರುವ ತೀವ್ರತಮ ತೊಂದರೆಗಳು ಇನ್ನು ಮೂರು ದಿನಗಳಲ್ಲಿ ತಿಳಿಯಾಗದೆ ಹೋದರೆ ಪ್ರತಿಭಟನೆಗಳನ್ನು

ನವದೆಹಲಿ: ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರದಿಂದ ಜನರು ಎದುರಿಸುತ್ತಿರುವ ತೀವ್ರತಮ ತೊಂದರೆಗಳು ಇನ್ನು ಮೂರು ದಿನಗಳಲ್ಲಿ ತಿಳಿಯಾಗದೆ ಹೋದರೆ ಪ್ರತಿಭಟನೆಗಳನ್ನು ತೀರ್ವಗೊಳಿಸುವುದಾಗಿ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರಕ್ಕೆ ಎಚ್ಚರಿಸಿದ್ದಾರೆ. 
ಆಜಾದ್ ಪುರ ಮಂಡಿಯಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿದ ಮಮತಾ "ಪ್ರಧಾನಿ ಮೋದಿ ಸಂವಿಧಾನದ ನಿಯಮಗಳನ್ನು ಮುರಿದಿದ್ದಾರೆ... ಈ ನಿರ್ಧಾರವನ್ನು ಜಾರಿಗೊಳಿಸುವ ಮೊದಲು ನೀವು (ಮೋದಿ) ಸರಿಯಾದ ಯೋಜನೆಯನ್ನು ಮಾಡಿಕೊಳ್ಳದೆ ಇದ್ದದ್ದೇಕೆ? ಇದರಿಂದ  ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ನಾವು ಮೂರು ದಿನಗಳ ಸಮಯಾವಕಾಶ ನೀಡಲಿದ್ದೇವೆ. ನೀವು ಈ ತೊಂದರೆಗಳನ್ನು ಸರಿಪಡಿಸದೆ ಇದ್ದರೆ ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಾವಿನ್ನು ಜೀವಂತವಾಗಿದ್ದೇವೆ" ಎಂದಿದ್ದಾರೆ. 
ಈ ದೇಶದ ಜನ ಮೋದಿಯವರ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಕೂಡ ಅವರು ಹೇಳಿದ್ದಾರೆ. ಸಂಸತ್ತಿನಲ್ಲಿ ಇದರ ವಿರುದ್ಧ ನಿಲುವಳಿ ಮಂಡಿಸುವುದಕ್ಕೆ ನಮ್ಮ ಸಂಸದರು ಸಿದ್ಧರಾಗುತ್ತಿದ್ದಾರೆ ಎಂದು ಕೂಡ ಮಮತಾ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!