ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 
ಪ್ರಧಾನ ಸುದ್ದಿ

ಮೂರು ದಿನಗಳೊಳಗೆ ನೋಟು ಬ್ಯಾನ್ ನಿರ್ಧಾರ ಹಿಂಪಡೆಯಿರಿ: ಕೇಜ್ರಿವಾಲ್ ಆಗ್ರಹ

೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರವನ್ನು ಮೂರೂ ದಿನಗಳೊಳಗೆ ವಾಪಸ್ ಪಡೆಯಿರಿ ಅಥವಾ ಸಾಮಾನ್ಯರ ಪ್ರತಿಭಟನೆಯನ್ನು ಎದುರಿಸಿ ಎಂದು

ನವದೆಹಲಿ: ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರವನ್ನು ಮೂರೂ ದಿನಗಳೊಳಗೆ ವಾಪಸ್ ಪಡೆಯಿರಿ ಅಥವಾ ಸಾಮಾನ್ಯರ ಪ್ರತಿಭಟನೆಯನ್ನು ಎದುರಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದ್ದಾರೆ. 
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ನೋಟು ಹಿಂಪಡೆತ ನಿರ್ಧಾರ ದೇಶದಾದ್ಯಂತ ನಗದು ಅರಾಜಕತೆ ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ. 
"ನೀವು ಜನರನ್ನು ಮೂರ್ಖರೆಂದು ತಿಳಿದಿದ್ದೀರಾ?" ಎಂದು ಕೇಳಿರುವ ಅವರು "ನಮ್ಮನ್ನು ಮೂರ್ಖರನ್ನಾಗಿಸಬೇಡಿ. ಸರತಿ ಸಾಲುಗಳಲ್ಲಿ (ಎಟಿಎಂಗಳ ಎದುರು) ನಿಲ್ಲುವುದು ರಾಷ್ಟ್ರಪ್ರೇಮ ಎಂದು ಹೇಳಬೇಡಿ. 
"ನಿಮ್ಮ ನಿರ್ಧಾರವನ್ನು ಮೂರು ದಿನಗಳಲ್ಲಿ ಹಿಂಪಡೆದುಕೊಳ್ಳಿ... ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಇಲ್ಲದೆ ಹೋದರೆ ಜನ ತಿರುಗಿ ಬೀಳಲಿದ್ದಾರೆ" ಎಂದು ಅವರು ಹೇಳಿದ್ದಾರೆ. 
ಈ ನಿರ್ಧಾರದಿಂದ ಅನಾನುಕೂಲತೆಗೆ ಒಳಗಾಗಿ ಇಲ್ಲಿಯವರೆಗೂ ೪೦ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿರುವುದಕ್ಕೆ ಕೂಡ ಅವರು ಕೇಂದ್ರ ಸರ್ಕಾರವನ್ನು ದೂಷಿಸಿದ್ದಾರೆ. 
"ಈ ೪೦ ಸಾವುಗಳಿಗೆ ಯಾರು ಜವಾಬ್ದಾರಿ?" ಎಂದು ಅವರು ಕೇಳಿದ್ದಾರೆ. 
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭ್ರಷ್ಟಾಚಾರ ಆರೋಪವನ್ನು ಕೂಡ ಕೇಜ್ರಿವಾಲ್ ಮಾಡಿದ್ದಾರೆ. ಮೋದಿ ಪ್ರಾಮಾಣಿಕ ಎಂದು ನಾನು ಕೂಡ ನಂಬುತ್ತಿದ್ದ ಕಾಲವೊಂದಿತ್ತು. ಈಗ ತೆರಿಗೆ ಅಧಿಕಾರಿಗಳು ಎರಡು ಕಾರ್ಪೊರೇಟ್ ಸಂಸ್ಥೆಗಳ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ಮೋದಿ ಅವರು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ಲಂಚ ತೆಗೆದುಕೊಂಡಿರುವ ಸ್ಪಷ್ಟ ಮಾಹಿತಿಯಿದೆ ಎಂದಿದ್ದಾರೆ. 
ಕಾರ್ಪೊರೇಟ್ ಸಂಸ್ಥೆಗಳಿಗೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳು ನೀಡಿದ ಸಾಲಾ ಮನ್ನಾ ಮಾಡಿ ಜನರಿಂದ ೧೦ ಲಕ್ಷ ಕೋಟಿ ಸಂಗ್ರಹಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಕೇಜ್ರಿವಾಲ್ ಖಂಡಿಸಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!