ಬಿಜೆಪಿ ಲೋಕಸಭಾ ಸದಸ್ಯ ಶತ್ರುಘನ್ ಸಿನ್ಹಾ 
ಪ್ರಧಾನ ಸುದ್ದಿ

ಮೋದಿ ಟೀಕೆ; ಶತ್ರುಘನ್ ಸಿನ್ಹಾ ಕಾಂಗ್ರೆಸ್ ಸೇರುವಂತೆ ಬಿಜೆಪಿ ಮುಖಂಡ ಸಲಹೆ

ನಟ ಮತ್ತು ಲೋಕಸಭಾ ಬಿಜೆಪಿ ಸದಸ್ಯ ಶತ್ರುಘನ್ ಸಿನ್ಹಾ ಅವರಿಗೆ ಕಾಂಗ್ರೆಸ್ ಪಕ್ಷ ಸೇರುವಂತೆ ಬಿಹಾರ ಬಿಜೆಪಿ ಅಧ್ಯಕ್ಷ ಮಂಗಲ್ ಪಾಂಡೆ ಗುರುವಾರ ಸಲಹೆ ನೀಡಿದ್ದಾರೆ.

ಪಾಟ್ನಾ: ನಟ ಮತ್ತು ಬಿಜೆಪಿ ಲೋಕಸಭಾ ಸದಸ್ಯ ಶತ್ರುಘನ್ ಸಿನ್ಹಾ ಅವರಿಗೆ ಕಾಂಗ್ರೆಸ್ ಪಕ್ಷ ಸೇರುವಂತೆ ಬಿಹಾರ ಬಿಜೆಪಿ ಅಧ್ಯಕ್ಷ ಮಂಗಲ್ ಪಾಂಡೆ ಗುರುವಾರ ಸಲಹೆ ನೀಡಿದ್ದಾರೆ. 
"ಪ್ರಧಾನಿ ಅವರ ಎಲ್ಲ ನಡೆಗಳಲ್ಲೂ ತಪ್ಪು ಕಾಣುವ ಸಿನ್ಹಾ ಕಾಂಗ್ರೆಸ್ ಸೇರುವುದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕು" ಎಂದು ಮೋದಿಯವರನ್ನು ಖಂಡಿಸಿ ಸಿನ್ಹಾ ಟ್ವೀಟ್ ಮಾಡಿದ್ದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. 
ನರೇಂದ್ರ ಮೋದಿ ಆಪ್ ಮೂಲಕ ನೋಟು ಹಿಂಪಡೆತ ನಿರ್ಧಾರವನ್ನು ೯೦% ಸ್ವಾಗತಿಸಿದ್ದಾರೆ ಎಂಬುದನ್ನು ಪ್ರಧಾನಿ ಹಂಚಿಕೊಂಡ ನಡೆಯನ್ನು ಸಿನ್ಹಾ ಟೀಕಿಸಿದ್ದರು. 
"ಮೂರ್ಖರ ಅರಮನೆಯಲ್ಲಿ ವಾಸಿಸುವುದನ್ನು ಮೊದಲು ನಿಲ್ಲಿಸಬೇಕು ಮತ್ತು ಪಟ್ಟಭಧ್ರ ಹಿತಾಸಕ್ತಿಗಳು ನಡೆಸುವ ಸಮೀಕ್ಷೆಗಳು ಮತ್ತು ಸ್ವಹಿತಾಸಕ್ತಿಯ ಕಥೆಗಳಿಗೆ ಮರುಳಾಗಬಾರದು" ಎಂದು ಸಿನ್ಹಾ ಟ್ವೀಟ್ ಮಾಡಿದ್ದರು. 
ಸಿನ್ಹಾ ಅವರ ಟ್ವೀಟ್ ಬಿಜೆಪಿ ಪಕ್ಷಕ್ಕೆ ಮುಜುಗರ ತಂದಿದೆ ಎಂದು ಬಹುತೇಕ ಬಿಜೆಪಿ ಮುಖಂಡರ ಆಂಬೋಣ. 'ಬಿಹಾರಿ ಬಾಬು ' ಎಂದೇ ಹೆಸರಾಗಿರುವ ಶತ್ರುಘನ್ ಸಿನ್ಹಾ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಬಿಜೆಪಿ ಲೋಕಸಭಾ ಸದಸ್ಯರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

SCROLL FOR NEXT