ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ 
ಪ್ರಧಾನ ಸುದ್ದಿ

ನೋಟು ಹಿಂಪಡೆತದ ಬಗ್ಗೆ ಶಿವಾಜಿ ಕುಡಿ ನೈಜ ಪರಿಸ್ಥಿತಿಯನ್ನು ಧ್ವನಿಸಿದ್ದಾರೆ: ಶಿವಸೇನೆ

ನೋಟು ಹಿಂಪಡೆತದ ಅವಧಿ ಮುಗಿದ ಮೇಲೆ ಪರಿಸ್ಥಿತಿ ಸುಧಾರಿಸದೆ ಹೋದರೆ ಜನ ಬ್ಯಾಂಕ್ ಗಳನ್ನು ಲೂಟಿ ಮಾಡಲಿದ್ದಾರೆ ಎಂದು ಎನ್ ಸಿ ಪಿ ಸಂಸದ ಉದಯನ್ ರಾಜೇ ಭೋಸಲೆ ಹೇಳಿರುವುದನ್ನು ಶಿವಸೇನೆ

ಮುಂಬೈ: ನೋಟು ಹಿಂಪಡೆತದ ಅವಧಿ ಮುಗಿದ ಮೇಲೆ ಪರಿಸ್ಥಿತಿ ಸುಧಾರಿಸದೆ ಹೋದರೆ ಜನ ಬ್ಯಾಂಕ್ ಗಳನ್ನು ಲೂಟಿ ಮಾಡಲಿದ್ದಾರೆ ಎಂದು ಎನ್ ಸಿ ಪಿ ಸಂಸದ ಉದಯನ್ ರಾಜೇ ಭೋಸಲೆ ಹೇಳಿರುವುದನ್ನು ಶಿವಸೇನೆ ಅನುಮೋದಿಸಿದೆ. 
"ನೋಟು ಹಿಂಪಡೆತ ನಿರ್ಧಾರ ದೇಶದ ಜನರನ್ನು ಕೆರಳಿಸಿದೆ. ಬಡ ಮತ್ತು ಕಾರ್ಮಿಕರ ಕಷ್ಟ ಎಲ್ಲೆಡೆ ಹೇಳತೀರದು" ಎಂದು ಸೇನಾ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ. 
ಛತ್ರಪತಿ ಶಿವಾಜಿ ರಾಜನ ೧೩ ನೇ ತಲೆಮಾರಿನ ರಾಜಕಾರಿಣಿ ಭೋಸಲೆ ಅವರ ಮಾತುಗಳನ್ನು ಉದಾಹರಿಸಿರುವ ಶಿವಸೇನೆ "ಅವರು ಮಾತುಗಳು ನಿಜ. ಅವರು ಸಾರ್ವಜನಿಕರ ಆಕ್ರೋಶವನ್ನು ತಿಳಿಸಿದ್ದಾರೆ" ಎಂದಿದ್ದು ಮೋದಿ ಸರ್ಕಾರಕ್ಕೆ ಸವಾಲೆಸೆದಿದೆ. 
೨೦೧೪ ರಲ್ಲಿ ಅಧಿಕಾರಕ್ಕೆ ಬರುವುದಕ್ಕೆ ಮುಂಚಿತವಾಗಿ ಮೋದಿ ಅವರು ತಮಗೆ ಶಿವಾಜಿ ಅವರ ಆಶೀರ್ವಾದ ಇದೆ ಎಂದಿದ್ದನ್ನು ಕೂಡ ಸಾಮ್ನಾದಲ್ಲಿ ಉಲ್ಲೇಖಿಸಲಾಗಿದೆ. 
"ರೈತರನ್ನು ಸಾವಿನ ದವಡೆಯತ್ತ ನೂಕಲಾಗುತ್ತಿದೆ. ಅವರು ಬ್ಯಾಂಕ್ ಗಳನ್ನು ಈಗ ಲೂಟಿ ಮಾಡಿದರು ಕೂಡ ಅವರಿಗೆ ಏನು ಸಿಗುವುದಿಲ್ಲ, ಏಕೆಂದರೆ ಸಹಕಾರಿ ಬ್ಯಾಂಕ್ ಗಳ ಮೇಲೆ ನಿಯಂತ್ರಣ ಹೇರಲಾಗಿದೆ. ಇದರ ಬದಲಿಗೆ ಸರ್ಕಾರವೇ ಅವರಿಗೆ ನೇಣು ಹಾಕಿ ಅವರನ್ನು ಕಳೆದುಕೊಂಡುಬಿಡಬೇಕು" ಎಂದು ಸೇನೆ ಆಕ್ರೋಶ ವ್ಯಕ್ತಪಡಿಸಿದೆ. 
"ಜನರ ಆಕ್ರೋಶವನ್ನು ಭೋಸಲೆ ತಮ್ಮದೇ ಶೈಲಿಯಲ್ಲಿ ವ್ಯಕ್ತಪಡಿಸಿದ್ದಾರೆ. ಕಪ್ಪು ಹಣವನ್ನು ಶೇಖರಿಸಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಜನರನ್ನು ತೊಂದರೆಗೀಡು ಮಾಡಿರುವುದೇಕೆ ಎಂದು ಅವರು ಕೇಳಿದ್ದಾರೆ" ಎಂದು ಸೇನೆ ಹೇಳಿದೆ. 
ಎನ್ ಸಿ ಪಿ ಪಕ್ಷದ ರಾಜಕೀಯ ವಿರೋಧಿಯಾಗಿದ್ದು, ಬಿಜೆಪಿಯ ಮೈತ್ರಿ ಪಕ್ಷವಾಗಿದ್ದರು ಶಿವಸೇನೆ ಈ ನಿಲುವು ತಳೆದಿರುವುದು ವಿಶೇಷ. ಮೋದಿ ನವೆಂಬರ್ ೮ ರಿಂದ ೫೦೦ ಮತ್ತು ೧೦೦೦ ನೋಟುಗಳನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಿದ್ದಾಗಿಲಿಂದಲೂ "ಗ್ರಾಮೀಣ ಭಾರತದಲ್ಲಿ ಪರಿಸ್ಥಿತಿ ಭಯಾನಕವಾಗಿದೆ" ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಪತ್ರಿಕೆ "ಈ ನಿರ್ಧಾರದಿಂದ ರೈತರು, ಕಾರ್ಮಿಕರು ಮತ್ತು ದಿನಕೂಲಿ ನೌಕರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈಗ ಅವರು ದೇಶಭಕ್ತಿ ಪ್ರದರ್ಶಿಸಲು ಬಾವುಟ ಹಿಡಿಯಲಿ ಎಂದು ನಾವು ನಿರೀಕ್ಷಿಸುವುದು ಹೇಗೆ" ಎಂದು ಕೂಡ ಪಕ್ಷ ಪ್ರಶ್ನಿಸಿದೆ. 
"ತರಕಾರಿ, ಹಣ್ಣು ಮತ್ತು ಹಾಲು ಕೊಳ್ಳುವವರಿಲ್ಲದೆ ಅವುಗಳನ್ನು ರಸ್ತೆಯಲ್ಲಿ ಎಸೆಯುವ ಪರಿಸ್ಥಿತಿ ಬಂದಿದೆ. ೧೦೦ ಮತ್ತು ೫೦೦ ರೂ ಗಳಿಗಾಗಿ ಅವರೆಲ್ಲ ರಸ್ತೆಯಲ್ಲಿ ಬಿಕಾರಿಗಳಂತೆ ಅಲೆದಾಡುತ್ತಿದ್ದಾರೆ" ಎಂದು ಕೂಡ ಸಂಪಾದಕೀಯ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ

‘ಸಿದ್ದರಾಮಯ್ಯಗೆ CD ತೋರಿಸಿ ರಾಜೀನಾಮೆ ಪಡೆದಿದ್ದಾರೆ’: ಯತ್ನಾಳ್​ ಸ್ಫೋಟಕ ಆರೋಪ

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್