ಸಂಸತ್ ಭವನ 
ಪ್ರಧಾನ ಸುದ್ದಿ

ಆದಾಯ ತೆರಿಗೆ ತಿದ್ದುಪಡಿ ಮಸೂದೆ-2016 ಲೋಕಸಭೆಯಲ್ಲಿ ಅಂಗೀಕಾರ

ಕಪ್ಪು ಕುಳಗಳಿಗೆ ಮತ್ತೊಂದು ಅವಕಾಶ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ಮಂಡಿಸಿದ್ದ ಆದಾಯ ತೆರಿಗೆ ಕಾಯಿದೆ ತಿದ್ದುಪಡಿ ಮಸೂದೆ 2016 ಅನ್ನು....

ನವದೆಹಲಿ: ಕಪ್ಪು ಕುಳಗಳಿಗೆ ಮತ್ತೊಂದು ಅವಕಾಶ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ಮಂಡಿಸಿದ್ದ ಆದಾಯ ತೆರಿಗೆ ಕಾಯಿದೆ ತಿದ್ದುಪಡಿ ಮಸೂದೆ 2016 ಅನ್ನು ಮಂಗಳವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.
ಕಪ್ಪು ಹಣದ ಮೇಲೆ ತೆರಿಗೆ ಹಾಗೂ ದಂಡ ವಿಧಿಸಲು ಅವಕಾಶ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ಆದಾಯ ತೆರಿಗೆ ಕಾಯಿದೆಗೆ ತಿದ್ದುಪಡಿ ತಂದಿದ್ದು, ಕಪ್ಪು ಹಣದ ಮೇಲೆ ಶೇ.30ರಿಂದ ಶೇ.80ರಷ್ಟು ತೆರಿಗೆ ಹಾಗೂ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರತಿಪಕ್ಷಗಳ ತೀವ್ರ ಗದ್ದಲದ ನಡುವೆಯೂ ಯಾವುದೇ ಚರ್ಚೆ ಇಲ್ಲದೆ ಆದಾಯ ತೆರಿಗೆ ಕಾಯಿದೆ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿದ್ದು, ಇದು ಹಣಕಾಸು ಮಸೂದೆಯಾಗಿರುವುದರಿಂದ ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಅಗತ್ಯ ಇಲ್ಲ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿ ಮೂರು ವಾರಗಳ ನಂತರ ನಿನ್ನೆ ವಿತ್ತ ಸಚಿವ ಅರುಣ್‌ ಜೇತ್ಲಿ ಅವರ ಆದಾಯ ತೆರಿಗೆ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ  ಮಂಡಿಸಿದ್ದರು. ಅಪನಗದೀಕರಣೋತ್ತರ ಹಣ ಜಮಾವಣೆಯ ಮೇಲೆ ಅದರ ಶೇ.50ರ ಪ್ರಮಾಣದಲ್ಲಿ ವಿಧಿಸಲ್ಪಡುವ ಒಟ್ಟು ತೆರಿಗೆ, ದಂಡ ಮತ್ತು ಸರ್ಚಾರ್ಜ್‌ ಪ್ರಮಾಣವನ್ನು ಹೊಸ ಕಾಯ್ದೆಯಲ್ಲಿ ಪ್ರಸ್ತಾವಿಸಿದ್ದಾರೆ.
ಕಪ್ಪು ಕುಳಗಳು ಘೋಷಿಸುವ ಹಣದ ಶೇ.25ರಷ್ಟನ್ನು ಬಡತನ ನಿಗ್ರಹ ಯೋಜನೆಗಳಡಿ ಕಡ್ಡಾಯವಾಗಿ, ನಿಬಡ್ಡಿಯಾಗಿ ಮತ್ತು ನಾಲ್ಕು ವರ್ಷಗಳ ಅವಧಿಯ ಬೀಗಮುದ್ರೆಗೆ ಒಳಪಡುವ, ನಿರ್ಬಂಧಗಳನ್ನು ಈ ತಿದ್ದುಪಡಿಯಲ್ಲಿ ಕಲ್ಪಿಸಲಾಗಿದೆ.
2016ರ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ ಕಪ್ಪು ಹಣವನ್ನು ಘೋಷಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ತಮ್ಮ ಅಘೋಷಿತ ಕಪ್ಪು ಹಣದ ಆದಾಯದ ಮೇಲೆ ಶೇ. 50 ತೆರಿಗೆ ಪಾವತಿಸಬೇಕಾಗುವುದು. ಅಲ್ಲದೆ ಹೆಚ್ಚುವರಿಯಾಗಿ ಶೇ.10ರ ದಂಡ ಮತ್ತು ಶೇ.33ರ ಪ್ರಮಾಣದಲ್ಲಿ ಪಿಎಂಜಿಕೆ ಸೆಸ್‌ (ಎಂದರೆ ಇದು ಶೇ.30ರ ಮೇಲಿನ ಶೇ.33 ಪ್ರಮಾಣ) ಪಾವತಿಸಬೇಕಾಗುವುದು.
ಇವೆಲ್ಲದರ ಹೊರತಾಗಿಯೂ ಕಾಳಧನವನ್ನು ಘೋಷಿಸಿಕೊಳ್ಳದೆ ಕಾಲಕ್ರಮದಲ್ಲಿ  ಕಾನೂನಿನ ಕೈಗೆ ಸಿಕ್ಕಿ ಬೀಳುವ ಕಾಳಧನಿಕರು ಶೇ.60 ತೆರಿಗೆ ಮತ್ತು ಶೇ.25 ತೆರಿಗೆ ಮೇಲಿನ ಸರ್ಚಾರ್ಜ್‌ (ಶೇ.15ರ ಪ್ರಮಾಣದಲ್ಲಿ) ಪಾವತಿಸಬೇಕಾಗುವುದು ಮತ್ತು ಇದು ಒಟ್ಟಾಗಿ ಶೇ.75 ಆಗುವುದು. ಇದರ ಜತೆಗೆ ಒಂದೊಮ್ಮೆ ಅಸೆಸಿಂಗ್‌ ಅಧಿಕಾರಿಯು ತಪ್ಪುಗಾರ ಕಾಳಧನಿಕನಿಗೆ ಶೇ.10ರ ಹೆಚ್ಚುವರಿ ದಂಡ ವಿಧಿಸಬಹುದಾಗಿದೆ ಎಂದು ತೀರ್ಮಾನಿಸಿದಲ್ಲಿ, ಶೇ.75 ತೆರಿಗೆಗೆ ಹೆಚ್ಚುವರಿಯಾಗಿ ಅದನ್ನು ಪಾವತಿಸಬೇಕಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು