ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಮರುಕಳಿಸಿದ ಟ್ವಿಟ್ಟರ್ ಖಾತೆ; 'ಸುಂದರ ದ್ವೇಷಿಗಳು' ಎಂದು ಪ್ರೀತಿಯ ಟ್ವೀಟ್ ಬರೆದ ರಾಹುಲ್

ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಒಂದು ದಿನದ ನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆ ಗುರುವಾರ ಮರುಕಳಿಸಿದ್ದು

ನವದೆಹಲಿ: ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಒಂದು ದಿನದ ನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆ ಗುರುವಾರ ಮರುಕಳಿಸಿದ್ದು "ನನ್ನೆಲ್ಲ ದ್ವೇಷಿಗಳಿಗೆ ಪ್ರೀತಿಯನ್ನು ಕಳುಹಿಸುತ್ತೇನೆ ಮತ್ತು ಅವರೆಲ್ಲರೂ ಒಳ್ಳೆಯವರು" ಎಂದು ಬರೆದಿದ್ದಾರೆ. 
"ನನ್ನನ್ನು ದ್ವೇಷಿಸುವ ಎಲ್ಲರಿಗು: ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ. ನೀವೆಲ್ಲರೂ ಸುಂದರ ಜನ. ನಿಮ್ಮ ದ್ವೇಷ ಅದನ್ನು ಮುಚ್ಚಿ ಹಾಕಿದೆ ಅಷ್ಟೇ" ಎಂದು ರಾಹುಲ್ ಗಾಂಧಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆ @OfficeOfRg ಮರುಕಳಿಸಿದ ಮೇಲೆ ಟ್ವೀಟ್ ಮಾಡಿದ್ದಾರೆ. 
ಗುರುವಾರ ಬೆಳೆಗ್ಗೆ ಕಾಂಗ್ರೆಸ್ ಪಕ್ಷದ ಟ್ವಿಟ್ಟರ್ ಖಾತೆ ಕೂಡ ಹ್ಯಾಕ್ ಆಗಿತ್ತು ಅದು ಕೂಡ ಈಗ ಮರುಕಳಿಸಿದೆ. 
"ಎಲ್ಲರಿಗು ನಮಸ್ಕಾರ! ನಾವು ಹಿಂದಿರುಗಿದ್ದೇವೆ. ಬೆಳಗ್ಗೆ ಬರೆದಿದ್ದ ಟ್ವೀಟ್ ಗಳಲ್ಲಿ ಅರಿವು ಇರಲಿಲ್ಲ. ಇರಲಿ, ಮೋದಿ ಅವರೇ ಈಗ ಮತ್ತೆ ಜನರ ಪ್ರಶ್ನೆಗಳಿಗೆ ಹಿಂದಿರುಗೋಣ, ಉತ್ತರ ಕೊಡುವಿರೆ?" ಎಂದು ಕಾಂಗ್ರೆಸ್ ಪಕ್ಷದ ಟ್ವಿಟ್ಟರ್ ಖಾತೆ @INCIncdia ಮರುಕಳಿಸಿದ ಮೇಲೆ ಟ್ವೀಟ್ ಮಾಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!