ಪ್ರಧಾನ ಸುದ್ದಿ

ಅಮೆರಿಕಾ ಗಾಯಕ-ಗೀತ ರಚನಕಾರ ಬಾಬ್ ಡೈಲಾನ್ 2016 ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ

Guruprasad Narayana
ಸ್ಟಾಕ್ ಹಾಲ್ಮ್: ಅಮೆರಿಕಾದ ಪಾಪ್ ಗಾಯಕ ಗೀತ ರಚನಕಾರ ಬಾಬ್ ಡೈಲಾನ್ 2016 ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿ ಗೆದ್ದಿದ್ದಾರೆ. 
75 ವರ್ಷದ ಬಾಬ್ ಡೈಲಾನ್ ಅಮೆರಿಕಾದ ಗೀತ ರಚನೆಯ ಸುದೀರ್ಘ ಸಂಪ್ರದಾಯದಲ್ಲಿ ಹೊಸತನ್ನು ಸೃಷ್ಟಿಸುತ್ತಿರುವುದಕ್ಕೆ ಈ ಪ್ರಶಸ್ತಿ ನೀಡುತ್ತಿರುವುದಾಗಿ ಸ್ವೀಡಿಷ್ ಅಕಾಡೆಮಿ ತಿಳಿಸಿದೆ. 
ಬಾಬ್ ಡೈಲಾನ್ ಬರೆದ 'ಬ್ಲೋಯಿಂಗ್ ಇನ್ ದ ವಿಂಡ್' ಮತ್ತು 'ದ ಟೈಮ್ಸ್ ದೆ ಆರ್ ಚೇಂಜಿಂಗ್' ಯುದ್ಧ ವಿರೋಧಿ ಮತ್ತು ನಾಗರಿಕ ಹಕ್ಕುಗಳ ರಾಷ್ಟ್ರಗೀತೆಗಳಾಗಿದ್ದವು ಎನ್ನಲಾಗುತ್ತದೆ. 
SCROLL FOR NEXT