ಬ್ರೆಜಿಲ್ ಅಧ್ಯಕ್ಷ ಮೈಕೆಲ್ ಟೆಮರ್ ರೊಂದಿಗೆ ಪ್ರಧಾನಿ ಮೋದಿ 
ಪ್ರಧಾನ ಸುದ್ದಿ

ನಾಲ್ಕು ಒಪ್ಪಂದಗಳಿಗೆ ಭಾರತ-ಬ್ರೆಜಿಲ್ ಸಹಿ

ಗೋವಾದ ಸಾಷ್ಟಿ ನಗರದಲ್ಲಿ ಸೋಮವಾರ ನಡೆದ ದ್ವಿಪಕ್ಷೀಯ ಮಾತುಕತೆ ನಂತರ ವೇಳೆ ಭಾರತ ಹಾಗೂ ಬ್ರೆಜಿಲ್ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ.

ಸಾಷ್ಟಿ: ಗೋವಾದ ಸಾಷ್ಟಿ ನಗರದಲ್ಲಿ ಸೋಮವಾರ ನಡೆದ ದ್ವಿಪಕ್ಷೀಯ ಮಾತುಕತೆ ನಂತರ ವೇಳೆ ಭಾರತ ಹಾಗೂ ಬ್ರೆಜಿಲ್ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ.
ಭಯೋತ್ಪಾದನೆ ನಿಗ್ರಹ, ಮಾದಕ ದ್ರವ್ಯ ಹಾವಳಿ ನಿರ್ಮೂಲನೆ, ಕೃಷಿ ಸಂಶೋಧನೆ ಮತ್ತು ಸೈಬರ್ ಭದ್ರತೆಯ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆಗೆ ಭಾರತ ಮತ್ತು ಬ್ರೆಜಿಲ್ ಒಪ್ಪಿಕೊಂಡಿವೆ.
ದ್ವಿಪಕ್ಷೀಯ ಮಾತುಕತೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಭಯೋತ್ಪಾದನೆ ನಿಗ್ರಹಕ್ಕಾಗಿ ಭಾರತ ಕೈಗೊಳ್ಳುತ್ತಿರುವ ಕ್ರಮಗಳಿಗೆ ಬ್ರೆಜಿಲ್ ಬೆಂಬಲ ನೀಡಿರುವುದನ್ನು ನಾವು ಮೆಚ್ಚುತ್ತೇವೆ. ಈ ಹಾವಳಿಯ ವಿರುದ್ಧದ ತಾರತಮ್ಯ ರಹಿತ ಹೋರಾಟದಲ್ಲಿ ವಿಶ್ವವು ಒಟ್ಟಾಗಬೇಕು ಎಂಬುದನ್ನು ನಾವಿಬ್ಬರೂ ಒಪ್ಪಿದ್ದೇವೆ’ಎಂದರು.
ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಅಂತಿಮಗೊಳಿಸುವ ಹಂತಕ್ಕೆ ಬ್ರೆಜಿಲ್ ಬಂದಿದೆ ಎಂದು ಹರ್ಷ ವ್ಯಕ್ತ ಪಡಿಸಿದ ಪ್ರಧಾನಿ, ಬ್ರೆಜಿಲ್ ಕಂಪೆನಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡಲು ಸ್ವಾಗತಿಸುವುದಾಗಿ ಹೇಳಿದರು. ಅಲ್ಲದೆ ಲ್ಯಾಟಿನ್ ಅಮೆರಿಕದ ಅತ್ಯಂತ ಮಹತ್ವದ ಆರ್ಥಿಕ ಪಾಲುದಾರರಲ್ಲಿ ಬ್ರೆಜಿಲ್ ಒಂದು. ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯ ಎಲ್ಲ ಮಟ್ಟಗಳಲ್ಲೂ ವಿಸ್ತರಿಸಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video