ತ್ರಿಪುರ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳ ಪರಾರಿ
2012 ರಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮೂವರು ತಪ್ಪಿತಸ್ಥರು ತ್ರಿಪುರಾ ಕೇಂದ್ರ ಕಾರಾಗೃಹದಿಂದ ಶನಿವಾರ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅಗರ್ತಲಾ: 2012 ರಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮೂವರು ತಪ್ಪಿತಸ್ಥರು ತ್ರಿಪುರಾ ಕೇಂದ್ರ ಕಾರಾಗೃಹದಿಂದ ಶನಿವಾರ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
"ಮೂವರು ತಪ್ಪಿತಸ್ಥರು - ಮಿಲನ್ ಡೆಬ್ಬರ್ಮ (28), ಸ್ವರ್ಣ ಕುಮಾರ್ ತ್ರಿಪುರ (22) ಮತ್ತು ರಬಿಂದ್ರ ತ್ರಿಪುರಾ (24) ಗುರುವಾರ ಮಧ್ಯರಾತ್ರಿ ಬಿಷಲಘರ್ ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ. ಪ್ರತಿನಿತ್ಯದ ಮಾಮೂಲಿ ಕರೆಘಂಟೆಯ ಸಮಯದಲ್ಲಿ ಅವರು ನಾಪತ್ತೆಯಾಗಿರುವುದು ತಿಳಿದಿದೆ" ಎಂದು ಸೇಫಾಹಿಜಲ ಜಿಲ್ಲಾ ಪೊಲೀಸ್ ಮುಖ್ಯಸ್ಥ ಸುದೀಪ್ತ ದಾಸ್ ಹೇಳಿದ್ದಾರೆ.
ತಪ್ಪಿಸಿಕೊಂಡವರನ್ನು ಪತ್ತೆ ಹಚ್ಚಲು ಭಾರಿ ಕಾರ್ಯಾಚರಣೆ ನಡೆಸಲಾಗಿದ್ದು, ರಾಜ್ಯದ ಎಲ್ಲ 74 ಪೊಲೀಸ್ ಠಾಣೆಗಳನ್ನು ಎಚ್ಚರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
"ಅವರು ಬಾಂಗ್ಲಾ ದೇಶಕ್ಕೆ ನುಸುಳದಂತೆ ತಡೆಯಲು ಗಡಿ ಭದ್ರತಾ ಪಡೆಗೂ ಹದ್ದಿನ ಕಣ್ಣಿಟ್ಟುರುವಂತೆ ತಿಳಿಸಲಾಗಿದೆ" ಎಂದು ದಾಸ್ ಹೇಳಿದ್ದಾರೆ.